ದಾವಣಗೆರೆ : ಕಾಮಗಾರಿ ಬಿಲ್ ವಿಚಾರಕ್ಕೆ ಗ್ರಾ.ಪಂ ಉಪಾಧ್ಯಕ್ಷ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಾವಣಗೆರೆಯ ಜಗಳೂರು ತಾಲ್ಲೂಕು ಪಂಚಾಯತ್ ಬಳಿ ನಡೆದಿದೆ.

ಭರಮ ಸಮುದ್ರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿರುವ ತಿಪ್ಪೇಸ್ವಾಮಿ ಏಕಾಏಕಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಸೂಸೈಡ್ಗೆ ಯತ್ನಿಸಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಿಲ್ ಪಾವತಿ ಮಾಡದೇ ಅಧಿಕಾರಿಗಳು ಉಪಾಧ್ಯಕ್ಷ ತಿಪ್ಪೇಸ್ವಾಮಿಯನ್ನು ಅಲೆದಾಡಿಸಿದ್ದು, ಈ ಬಗ್ಗೆ ಪಿಡಿಓ ಸೇರಿದಂತೆ ಹಲವು ಅಧಿಕಾರಿಗಳಿಗೆ ಮನವಿ ಮಾಡಿದ್ರೂ ನಿರ್ಲಕ್ಷ್ಯ ಮಾಡಿದ್ದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನನೊಂದ ಗ್ರಾ.ಉಪಾಧ್ಯಕ್ಷ ತಿಪ್ಪೇಸ್ವಾಮಿ ಕೊನೆಗೆ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳೀಯರು ತಿಪ್ಪೇಸ್ವಾಮಿ ಮೇಲೆ ನೀರು ಹಾಕಿ ರಕ್ಷಣೆ ಮಾಡಿದ್ದಾರೆ. ಇದೀಗ PDO ಕೊಟ್ರೇಶ್, EO ವಿರುದ್ಧ ಗ್ರಾ.ಪಂ ಉಪಾಧ್ಯಕ್ಷ ತಿಪ್ಪೇಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬ್ರಾಹ್ಮಣ ಸಂಪ್ರದಾಯದಂತೆ ಇಂದೇ ಹಾಸ್ಯ ನಟ ಉಮೇಶ್ ಅಂತ್ಯಕ್ರಿಯೆ!







