ಬ್ರಾಹ್ಮಣ ಸಂಪ್ರದಾಯದಂತೆ ಇಂದೇ ಹಾಸ್ಯ ನಟ ಉಮೇಶ್ ಅಂತ್ಯಕ್ರಿಯೆ!

ಕನ್ನಡ ಚಿತ್ರರಂಗದ ಹಾಸ್ಯ ನಟ, ಪೋಷಕ ನಟ ಉಮೇಶ್ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ನಟ ಉಮೇಶ್ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ರವೀಂದ್ರ ಕಲಾ ಕ್ಷೇತ್ರದಲ್ಲಿ ನಟ ಉಮೇಶ್​ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಅಭಿಮಾನಿಗಳು, ಆಪ್ತರು & ಚಿತ್ರರಂಗದವರಿಂದ ಉಮೇಶ್​ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಹಿರಿಯ ನಟಿ ಗಿರಿಜಾ ಲೋಕೇಶ್, ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ರಂಗಕರ್ಮಿ ನಾಗರಾಜಮೂರ್ತಿ ಸೇರಿ ಹಲವು ಗಣ್ಯರು ನಟ ಎಂ.ಎಸ್. ಉಮೇಶ್ ಅಂತಿಮ ದರ್ಶನ ಪಡೆದಿದ್ದಾರೆ.

ಉಮೇಶ್​ ಒಡನಾಟ ನೆನಪು ಮಾಡಿಕೊಂಡು ಕಲಾವಿದರು ಕಂಬನಿ ಮಿಡಿದಿದ್ದಾರೆ. ಇಂದು ಸಂಜೆ 5.30ರ ಬಳಿಕ ಉಮೇಶ್ ಬನಶಂಕರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತಿಮ ವಿಧಿ ವಿಧಾನ ನಡೆಯಲಿದೆ.

ಇದನ್ನೂ ಓದಿ : ಕಾಂತಾರ ದೈವವನ್ನು ‘ದೆವ್ವ’ ಎಂದ ರಣವೀರ್ ಸಿಂಗ್ – ಭುಗಿಲೆದ್ದ ವಿವಾದ!

Btv Kannada
Author: Btv Kannada

Read More