‘ಕಾಂತಾರ’ ಸಿನಿಮಾದ ದೈವದ ನಟನೆಯನ್ನು ಅನುಕರಿಸಲು ಹೋಗಿ ನಟ ರಣವೀರ್ ಸಿಂಗ್ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ದೈವದ ಅಭಿನಯವನ್ನು ‘ದೆವ್ವ’ ಎಂದು ಹೇಳಿ, ಕೆಟ್ಟದಾಗಿ ನಟಿಸಿ ತೋರಿಸಿದ್ದರಿಂದ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗೋವಾ ಚಲನಚಿತ್ರೋತ್ಸವದಲ್ಲಿ ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಭಾಗಿಯಾಗಿದ್ದರು. ಆ ವೇಳೆ, ರಿಷಬ್ ಎದುರಿನಲ್ಲೇ ಕಾಂತಾರ ಸೀಕ್ವೆಲ್ ಬಗ್ಗೆ, ರಿಷಬ್ ಶೆಟ್ಟಿಯವರ ನಟನೆಯನ್ನು ಹೊಗಳಿ ಮಾತನಾಡಿದ್ದಾರೆ. ಇದೇ ವೇಳೆ ರಿಷಬ್ ನಟನೆ ಹೊಗಳುತ್ತ ಅನುಕರಣೆ ಮಾಡುತ್ತ ಅದರಲ್ಲಿ ಇರುವ ‘ದೈವ’ವನ್ನು ‘ಫೀಮೇಲ್ ಘೋಸ್ಟ್’ ಎಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ರಣವೀರ್ ಸಿಂಗ್ ಅವರು ‘ದೈವ’ವನ್ನು ‘ದೆವ್ವ’ ಎಂದಿದ್ದಲ್ಲದೇ ರಿಷಬ್ ಎದುರಿನಲ್ಲೇ ಅವರನ್ನು ಅನುಕರಣೆ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಘಟನೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಚರ್ಚೆಗೆ ಗುರಿಯಾಗಿ, ನಟ ರಣವೀರ್ ಸಿಂಗ್ ಬಗ್ಗೆ ಹಲವು ಜನರು ತೀರಾ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ರಣವೀರ್ ಸಿಂಗ್ ಅವರ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಇದೀಗ ತೀವ್ರ ಚರ್ಚೆ ಆರಂಭವಾಗಿದೆ. ಚಾಮುಂಡಿ ದೈವವನ್ನು ’ಫೀಮೇಲ್ ಘೋಸ್ಟ್’ ಎಂದರೆ ಏನರ್ಥ? ಸೆಲೆಬ್ರೆಟಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವ ಮೊದಲು ಆ ಬಗ್ಗೆ ಅಗತ್ಯವಿರುವ ಮಾಹಿತಿ ಹೊಂದಿರಬೇಕು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಕೊಲೆ – ಚಾಕುವಿನಿಂದ ಇರಿದು ದುಷ್ಕರ್ಮಿ ಎಸ್ಕೇಪ್!
Author: Btv Kannada
Post Views: 190







