ಬೆಂಗಳೂರು : ಮಹಿಳೆಯೊಬ್ಬಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಶೇಷಾದ್ರಿಪುರಂನ 1ನೇ ಮುಖ್ಯರಸ್ತೆಯಲ್ಲಿ ನಡೆದಿದೆ. ಶರಣಮ್ಮ ( 23) ಕೊಲೆಯಾದ ಮಹಿಳೆ.

ಶರಣಮ್ಮ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನವರು. ಶರಣಮ್ಮ ಹಾಗೂ ಪತಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡ್ತಿದ್ದರು. ವಿಜಯಪುರ ಮೂಲದ ವ್ಯಕ್ತಿಯಿಂದಲೇ ಈ ಹತ್ಯೆ ನಡೆದಿದೆ.
ನಿನ್ನೆ ಸಂಜೆ 6:30ರ ಸುಮಾರಿಗೆ ಕೊಲೆ ಮಾಡಿದ ವ್ಯಕ್ತಿ ಬಂದು, ಏಕಾಏಕಿ ಶರಣಮ್ಮ ಜೊತೆ ಜಗಳ ಆಡಿದ್ದಾನೆ. ಬಳಿಕ ತನ್ನ ಬಳಿಯ ಚಾಕುವಿನಿಂದ ಚುಚ್ಚಿ ಎಸ್ಕೇಪ್ ಆಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಶರಣಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸದ್ಯ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದಿತ್ವಾ ಚಂಡಮಾರುತ ಎಫೆಕ್ಟ್ – ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ತುಂತುರು ಮಳೆ, ಮೈ ನಡುಗಿಸುವ ಚಳಿ!
Author: Btv Kannada
Post Views: 200







