ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ – ಅಮ್ಮ-ಮಗ ಸ್ಥಳದಲ್ಲೇ ಸಾವು!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ರಸ್ತೆ ಅಪಘಾತಕ್ಕೆ ಅಮ್ಮ- ಮಗ ಬಲಿಯಾಗಿದ್ದಾರೆ. ಅಶ್ವಿನಿ -ಮೃತ ತಾಯಿ, ಅಭಿಲಾಶ್ -ಮೃತ ಮಗ. ಇಂದು ಬೆಳಗ್ಗೆ 7.30ಕ್ಕೆ ಮೈಸೂರು ರಸ್ತೆಯ ಝುಡಿಯೋ ಶಾಪ್ ಎದುರು ಈ ಭೀಕರ ಅಪಘಾತ ಸಂಭವಿಸಿದೆ.

ಅಮ್ಮ- ಮಗ ಮೈಸೂರು ರಸ್ತೆಯಿಂದ ಮಾರ್ಕೆಟ್ ಕಡೆಗೆ ಬೈಕ್​​ನಲ್ಲಿ ಹೋಗ್ತಿದ್ದರು. ಕಾರು ಮತ್ತು ಕಂಟೇನರ್ ಮಧ್ಯೆದಲ್ಲಿ ಬೈಕ್ ಚಲಾಯಿಸಿದ್ದು, ಈ ವೇಳೆ ಕಂಟೇನರ್​ಗೆ ಟಚ್ ಆಗಿ ಅಮ್ಮ- ಮಗ ಕೆಳಗಡೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಇಬ್ಬರ ತಲೆಗೆ ತೀವ್ರ ಪೆಟ್ಟಾಗಿದೆ.

ಕೆಳಗೆ ಬಿದ್ದ ಕೆಲವೇ ಕ್ಷಣಗಳಲ್ಲಿ ಇಬ್ಬರು ಉಸಿರು ಚೆಲ್ಲಿದ್ದಾರೆ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಮೃತದೇಹಗಳನ್ನ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ : ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗೆ ಗೌರವ ಡಾಕ್ಟರೇಟ್ ಪ್ರದಾನ!

Btv Kannada
Author: Btv Kannada

Read More