ಕೋಲಾರ : ಆಂಧ್ರದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಕರ್ನಾಟಕ ಮೂಲದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ವೆಂಕಟೇಶಪ್ಪ (76), ಮೀನಾಕ್ಷಿ(26), ಸತೀಶ್ (34), ಬಣಿತ್ ಗೌಡ(6), ರಿತ್ವಿಕ್ (4) ಮೃತ ದುರ್ದೈವಿಗಳು.

ಇಂದು ಬೆಳಿಗ್ಗೆ 5 ಗಂಟೆಗೆ ಮಂತ್ರಾಲಯದಿಂದ ಕೋಲಾರಕ್ಕೆ ಬರುವಾಗ ಈ ಭೀಕರ ಅಪಘಾತ ಸಂಭವಿಸಿದೆ. ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿ ಐವರು ಮೃತಪಟ್ಟಿದ್ದಾರೆ.

ಆಂಧ್ರದ ಕರ್ನೂಲ್ ಜಿಲ್ಲೆಯ ಎಮ್ಮಿಗನೂರು ತಾಲೂಕಿನ ಕೋಟಿಕಲ್ ಗ್ರಾಮದ ಬಳಿ ಅಪಘಾತ ನಡೆದಿದೆ. ಮೃತರಲ್ಲಿ ನಾಲ್ವರು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಚಿಕ್ಕ ಹೊಸಹಳ್ಳಿ ಗ್ರಾಮದವರಾಗಿದ್ದು, ವೆಂಕಟೇಶಪ್ಪ ಎಂಬಾತ ಮಾಲೂರು ತಾಲ್ಲೂಕು ನೂಟವೆ ಗ್ರಾಮದವರಾಗಿದ್ದಾರೆ. ಈ ಭೀಕರ ಅಪಘಾತದಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ : ಸಿಎಂ-ಡಿಸಿಎಂ ‘ಬ್ರೇಕ್ ಫಾಸ್ಟ್ ಮೀಟಿಂಗ್’ಗೆ ಆರ್. ಅಶೋಕ್ ಟಾಂಗ್ – ಅದು ‘ಬ್ರೇಕ್ ಆಗೋ ಮೀಟಿಂಗ್’, ಬರೀ ಜಗಳ ಬಿಟ್ರೆ ಏನೂ ಆಗಲ್ಲ!







