ರೌಡಿ ಲಕ್ಷ್ಮಣ ಹತ್ಯೆಯ ಮೋಸ್ಟ್ ವಾಂಟೆಡ್ ಆರೋಪಿ ಕ್ಯಾಟ್ ರಾಜಾ ಅರೆಸ್ಟ್!

ಬೆಂಗಳೂರು : ಮಹಾಲಕ್ಷ್ಮಿ ಲೇಔಟ್ ಪೊಲೀಸರು ಕುಖ್ಯಾತ ರೌಡಿ ಲಕ್ಷ್ಮಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ರೌಡಿಶೀಟರ್ ಕ್ಯಾಟ್ ರಾಜಾ‌ನನ್ನು ಗುಡಿಬಂಡೆಯಲ್ಲಿ ಬಂಧಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರಿಂದ ಸರ್ವೀಲಿಯನ್ಸ್ ಮೂಲಕ ಬಂಧನ. ಈತ ಈ ಹಿಂದೆ ಪೊಲೀಸರ ಗುಂಡೇಟಿಗೆ ಒಳಗಾಗಿ ಗಾಯಗೊಂಡಿದ್ದ ಕ್ಯಾಟ್ ರಾಜಾ, ಗಾಯ ಗುಣವಾಗುತ್ತಿದ್ದಂತೆ ಮತ್ತೆ ರೌಡಿಸಂ ಶುರುಹಚ್ಚಿಕೊಂಡಿದ್ದ.

ಜೈಲುವಾಸದ ಬಳಿಕ ತಲೆಮರೆಸಿಕೊಂಡಿದ್ದ ಕ್ಯಾಟ್ ರಾಜಾ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಬಿಲ್ಡಪ್ ವೀಡಿಯೋಗಳನ್ನು ಮಾಡಿಸುವ ಮೂಲಕ ತನ್ನ ರೌಡಿಸಂ ಚಟುವಟಿಕೆಗಳನ್ನು ಮರುಪ್ರಾರಂಭಿಸಿದ್ದನು. ಪೊಲೀಸರು ಆತನ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದರು. ಈತ ಈ ಹಿಂದೆ ಪೊಲೀಸರ ಕಾಲಿಗೆ ಗುಂಡು ತಗುಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದನು. ಗಾಯ ಸಂಪೂರ್ಣ ಗುಣವಾಗುವವರೆಗೆ ಶಾಂತವಾಗಿದ್ದ ಈತ, ಗುಣವಾದ ಕೂಡಲೇ ಮತ್ತೆ ರೌಡಿ ಕೃತ್ಯಗಳಿಗೆ ಇಳಿದಿದ್ದನು.

ಪೊಲೀಸರು ಈತನನ್ನು ಗುಡಿಬಂಡೆಯಿಂದ “ಎತ್ತಾಕ್ಕೊಂಡು” ಬಂದು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ. ಕ್ಯಾಟ್ ರಾಜಾ ಮತ್ತೆ ಜೈಲೂಟಕ್ಕೆ ಸಿದ್ಧನಾಗಿದ್ದು, ಮಹಾಲಕ್ಷ್ಮಿ ಲೇಔಟ್ ಪೊಲೀಸರ ಈ ಕಾರ್ಯಚರಣೆ ರೌಡಿಗಳಿಗೆ ಬಿಸಿ ಮುಟ್ಟಿಸಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ IT ರೇಡ್ – 100 ಕೋಟಿ ರೂ. ಮೌಲ್ಯದ ಅಕ್ರಮ ವಹಿವಾಟು ಬಯಲು!

Btv Kannada
Author: Btv Kannada

Read More