ಶಿವಣ್ಣ-ಉಪೇಂದ್ರ-ರಾಜ್​ ಬಿ ಶೆಟ್ಟಿ ಪ್ಯಾನ್ ಇಂಡಿಯಾ​ ಸಿನಿಮಾಗೆ ಅಗ್ರಸ್ಥಾನ – BMS ಟ್ರೆಂಡಿಂಗ್‌ನಲ್ಲಿ ’45’ ನಂ-1.. ಡಿ.25ಕ್ಕೆ ಚಿತ್ರ ರಿಲೀಸ್!

ಡಿಸೆಂಬರ್​ನಲ್ಲಿ ಸಿನಿ ಪ್ರಿಯರಿಗೆ ಬಹುದೊಡ್ಡ ಮನರಂಜನೆಯನ್ನು ನೀಡಲು ಸಿದ್ಧವಾಗಿದೆ. ಮೂರು ಸಿನಿಮಾಗಳು ರಿಲೀಸ್​ಗೆ ರೆಡಿಯಾಗಿದ್ದು, ಅವುಗಳಲ್ಲಿ ‘ಬುಕ್‌ಮೈಶೋ’ ವೇದಿಕೆಯಲ್ಲಿ ಅತಿ ಹೆಚ್ಚು ಆಸಕ್ತಿ ಪಡೆದು ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವುದು ನಿರ್ದೇಶಕ ಅರ್ಜುನ್ ಜನ್ಯ ಅವರ ಚೊಚ್ಚಲ ಸಿನಿಮಾ ’45’.

ಸ್ಯಾಂಡಲ್​ವುಡ್​ನ ಮಲ್ಟಿಸ್ಟಾರರ್ ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ನಟಿಸಿರುವ ’45’ ಚಿತ್ರದ ಬಗ್ಗೆ ಸಿನಿಮಾ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಸೃಷ್ಟಿಯಾಗಿದೆ. BMSನಲ್ಲಿ ಪ್ರೇಕ್ಷಕರು ತೋರುತ್ತಿರುವ ಅಪಾರ ಆಸಕ್ತಿಯು ಇದಕ್ಕೆ ಸಾಕ್ಷಿಯಾಗಿದೆ. ಈ ಚಿತ್ರ ಕೇವಲ ಒಂದು ಸ್ಟಾರ್ ಸಿನೆಮಾ ಮಾತ್ರವಲ್ಲ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ಕ್ರಿಸ್‌ಮಸ್ ಹಬ್ಬದಂದು, ಅಂದರೆ ಡಿಸೆಂಬರ್ 25 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ.

ಈ ಸಿನಿಮಾ ಪೋಸ್ಟ್‌ಪ್ರೊಡಕ್ಷನ್ ಹಂತದಲ್ಲಿರುವಾಗಲೇ ಸಾಕಷ್ಟು ಗಮನ ಸೆಳೆದಿದ್ದು, ಹಾಲಿವುಡ್ ಮಟ್ಟದ ವಿಎಫ್‌ಎಕ್ಸ್ (VFX) ಕೆಲಸಗಳಿಗಾಗಿ ಈ ಸಿನಿಮಾ ಸುದ್ದಿ ಮಾಡಿದೆ. ಅರ್ಜುನ್ ಜನ್ಯ ಅವರ ಸಂಗೀತದ ಮೋಡಿ ಮತ್ತು ಸ್ಟಾರ್ ನಟರ ಕಮಾಲ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಕಿಚ್ಚ ಸುದೀಪ್ ನಟನೆಯ ಮಾರ್ಕ್​, ದರ್ಶನ್​ ಅಭಿನಯದ ಡೆವಿಲ್ ಚಿತ್ರ ಕೂಡ ಡಿಸೆಂಬರ್​​ನಲ್ಲಿಯೇ ರಿಲೀಸ್​ ಆಗುತ್ತಿದೆ. ಆದರೆ ಪ್ರೇಕ್ಷಕರ ಆಸಕ್ತಿ ಮಾತ್ರ ’45’ ಮೇಲಿದೆ ಎಂದು BMS ಅಂಕಿ-ಅಂಶಗಳು ಹೇಳುತ್ತಿವೆ. ಈ ಟ್ರೆಂಡಿಂಗ್‌ನಿಂದ ಡಿಸೆಂಬರ್ ಸಿನೆಮಾ ರೇಸ್‌ನಲ್ಲಿ ’45’ ಸಿನೆಮಾ ಮುಂಚೂಣಿಯಲ್ಲಿದೆ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ : ತಾನು ಪ್ರೀತಿಯಿಂದ ಸಾಕಿದ ಪಿಟ್‌ಬುಲ್ ಶ್ವಾನದ ದಾಳಿಗೆ ಯುವತಿ ಬಲಿ!

Btv Kannada
Author: Btv Kannada

Read More