ಬೆಂಗಳೂರು ಕಮಿಷನರೇಟ್​ ವ್ಯಾಪ್ತಿಗೆ ಮಾದನಾಯಕನಹಳ್ಳಿ & ರಾಜಾನುಕುಂಟೆ ಪೊಲೀಸ್ ಠಾಣೆ – ಕ್ರೈಂ ರೇಟ್​ ಇಳಿಕೆಗೆ ಕ್ರಮ.. ಗೃಹ ಇಲಾಖೆ ಆದೇಶ!

ಬೆಂಗಳೂರು : ಬೆಂಗಳೂರಿನ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಗೃಹ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಇದೀಗ ಮತ್ತೆರಡು ಹೊಸ ಪೊಲೀಸ್ ಠಾಣೆಗಳನ್ನು ಸೇರ್ಪಡೆಗೊಳಿಸಲಾಗಿದೆ.

ಮಾದನಾಯಕನ ಹಳ್ಳಿ ಮತ್ತು ರಾಜಾನುಕುಂಟೆ ಪೊಲೀಸ್ ಠಾಣೆಗಳು. ಈ ಎರಡು ಠಾಣೆಗಳನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ವಾಯವ್ಯ ವಿಭಾಗ ವ್ಯಾಪ್ತಿಗೆ ಸೇರಿಸಲಾಗಿದೆ. ಈ ಎರಡೂ ಪೊಲೀಸ್ ಠಾಣೆಗಳು ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು.

ನಗರ ವ್ಯಾಪ್ತಿಯು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ, ಕಾನೂನು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಅಪರಾಧ ನಿಯಂತ್ರಣಕ್ಕೆ ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಗೃಹ ಇಲಾಖೆ ಈ ಸಂಬಂಧ ಅಧಿಕೃತ ಆದೇಶವನ್ನು ಹೊರಡಿಸಿದೆ.

ಇದನ್ನೂ ಓದಿ : ದಕ್ಷ IAS ಅಧಿಕಾರಿ ಮಹಾಂತೇಶ್ ಬೀಳಗಿ ಕುಟುಂಬಕ್ಕೆ ಕ್ಲಾಸ್-1 ಹುದ್ದೆ ನೀಡಿ – ಸಿಎಂಗೆ ಬಿವೈ ವಿಜಯೇಂದ್ರ ಪತ್ರ!

Btv Kannada
Author: Btv Kannada

Read More