ಬೆಂಗಳೂರು : ನಗರದ ಪ್ರಮುಖ ಜೈಲುಗಳಲ್ಲಿ ಒಂದಾದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಇದೀಗ ಮತ್ತೊಂದು ಗಂಭೀರ ವಿವಾದಕ್ಕೆ ಸಿಲುಕಿದೆ. ಜೈಲಿನ ಒಳಗಿರುವ ಕೈದಿಗಳೇ ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ವೈನ್ (ಮದ್ಯ) ತಯಾರಿಸುತ್ತಿದ್ದು, ಇಡೀ ಜೈಲು ಆವರಣವು ‘ಮದ್ಯಾಲಯ’ವಾಗಿ ಮಾರ್ಪಟ್ಟಿದೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಕೈದಿಗಳು ಜೈಲಿನ ವೈನ್ ತಯಾರಿಕೆಯಲ್ಲಿ ಪರಿಣಿತರಾಗಿದ್ದಾರೆ. ಜೈಲಿನ ಕ್ಯಾಂಟೀನ್‌ಗೆ ಬರುವ ಹಣ್ಣುಗಳು ಹಾಗೂ ಕೈದಿಗಳನ್ನು ನೋಡಲು ಬರುವವರು ತರುವ ಸೇಬು, ದ್ರಾಕ್ಷಿ ಮತ್ತು ಅನಾನಸ್ ಹಣ್ಣುಗಳನ್ನು ಕಚ್ಚಾ ವಸ್ತುವಾಗಿ ಬಳಸಲಾಗುತ್ತಿತ್ತು. ಈ ಹಣ್ಣುಗಳನ್ನು ಚೆನ್ನಾಗಿ ಜಜ್ಜಿ, ಅದಕ್ಕೆ ಯೀಸ್ಟ್ (Yeast) ಮಿಶ್ರಣ ಮಾಡಲಾಗುತ್ತಿತ್ತು. ಈ ಮಿಶ್ರಣವನ್ನು ಗಾಳಿಯಾಡದಂತೆ ಬಾಟಲಿಗಳಲ್ಲಿ ಶೇಖರಿಸಿ, ಅವುಗಳನ್ನು ಭೂಮಿಯೊಳಗೆ ಹೂತು ಹಾಕಲಾಗುತ್ತಿತ್ತು.

ಸಾಮಾನ್ಯವಾಗಿ, ಮೂರು ದಿನಗಳ ಬಳಿಕ ಬಾಟಲಿಗಳನ್ನು ಹೊರತೆಗೆದು, ಅದು ಆಲ್ಕೋಹಾಲ್‌ಗೆ ಪರಿವರ್ತನೆ ಆಗಿದೆಯೇ ಎಂದು ಖಚಿತಪಡಿಸಿಕೊಂಡು ಬಳಸುತ್ತಿದ್ದರು. ಈ ಅಕ್ರಮ ಮದ್ಯವನ್ನು ಕೆಲ ಕೈದಿಗಳು ಜೈಲಿನ ಒಳಗೇ ಮಾರಾಟ ಮಾಡುತ್ತಿದ್ದರು. ಬರ್ತಡೇ ಮತ್ತಿತರ ವಿಶೇಷ ಸಂದರ್ಭಗಳಿಗಾಗಿ ತಿಂಗಳ ಮುಂಚೆಯೇ ದೊಡ್ಡ ಮಟ್ಟದ ಮದ್ಯ ತಯಾರಿಕೆಯ ಸಿದ್ಧತೆಗಳು ನಡೆಯುತ್ತಿದ್ದವು.

ಇದನ್ನೂ ಓದಿ : ನೆಲಮಂಗಲದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು!







