ಬೆಂಗಳೂರು : ರಾಜ್ಯದ 10 ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಾಏಕಿ ದಾಳಿ ನಡೆಸಿ ಬೃಹತ್ ಪ್ರಮಾಣದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ. ಒಟ್ಟು 47 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಅಪಾರ ಪ್ರಮಾಣದ ಚಿನ್ನಾಭರಣ, ನಗದು ಹಾಗೂ ಆಸ್ತಿ ದಾಖಲೆಗಳು ಸಿಕ್ಕಿವೆ.

ಭ್ರಷ್ಟ ಅಧಿಕಾರಿಗಳ ಮೇಲಿನ ಲೋಕಾ ದಾಳಿಯಲ್ಲಿ ಸಿಕ್ಕಿದ್ದೇನು?
ಎಲೆಕ್ಟ್ರಾನಿಕ್ ಸಿಟಿ RTO ಕಚೇರಿ ಶಾಖಾಧೀಕ್ಷಕ ಕೃಷ್ಣಮೂರ್ತಿ.ಪಿ. ಅವರಿಗೆ ಸಂಬಂಧಿಸಿದ 7 ಸ್ಥಳಗಳಲ್ಲಿ ನಡೆದ ಲೋಕಾಯುಕ್ತ ಶೋಧದಲ್ಲಿ 4 ಕೋಟಿ 26 ಲಕ್ಷ ರೂ. ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿ ಪತ್ತೆಯಾಗಿದೆ. ಇದರಲ್ಲಿ 3 ಕೋಟಿ 34 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ (7 ನಿವೇಶನಗಳು, 4 ವಾಸದ ಮನೆಗಳು, 5 ಎಕರೆ 30 ಗುಂಟೆ ಕೃಷಿ ಜಮೀನು) ಮತ್ತು 92 ಲಕ್ಷ ರೂ. ಮೌಲ್ಯದ ಚರಾಸ್ತಿ (22 ಲಕ್ಷ ನಗದು, 32 ಲಕ್ಷ ಮೌಲ್ಯದ ಚಿನ್ನಾಭರಣ, 16 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು, 22 ಲಕ್ಷ ಮೌಲ್ಯದ ವಾಹನಗಳು) ಸೇರಿದೆ.

ಮೈಸೂರು, ಹೂಟ್ಲಳ್ಳಿ ಪುರಸಭೆ ರಾಜಸ್ವಾಮಿ ನಿರೀಕ್ಷಕ ಶ್ರೀ ರಾಮಸ್ಚಾಮಿ.ಸಿ ಅವರ ಮನೆ ಮೇಲೆ ಲೋಕಾ ದಾಳಿ ನಡೆಸಿದ್ದು, ಈ ವೇಳೆ 2 ಕೋಟಿ 77 ಲಕ್ಷ 75 ಸಾವಿರದ 760 ರೂ. ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿ ಪತ್ತೆಯಾಗಿದೆ. ಇದರಲ್ಲಿ 1 ಕೋಟಿ 65 ಲಕ್ಷ 54 ಸಾವಿರ ರೂ. ಸ್ಥಿರಾಸ್ತಿ (3 ನಿವೇಶನಗಳು, 2 ವಾಸದ ಮನೆಗಳು, 7 ಎಕರೆ ಕೃಷಿ ಭೂಮಿ) ಹಾಗೂ 1 ಕೋಟಿ 12 ಲಕ್ಷ 21 ಸಾವಿರದ 760 ರೂ. ಮೌಲ್ಯದ ಚರಾಸ್ತಿ (1 ಕೋಟಿ 15 ಲಕ್ಷದ 660 ರೂ. ನಗದು, 86 ಲಕ್ಷ 26 ಸಾವಿರ 100 ರೂ. ಮೌಲ್ಯದ ಚಿನ್ನಾಭರಣ, 14 ಲಕ್ಷ ಮೌಲ್ಯದ ವಾಹನಗಳು, 10 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು) ಪತ್ತೆಯಾಗಿವೆ.
ದಾವಣಗೆರೆ APMC ಸಹಾಯಕ ನಿರ್ದೇಶಕ ಪ್ರಭು ಜೆ ಅವರ ಮೇಲೆ ನಡೆದ ದಾಳಿಯಲ್ಲಿ 2 ಕೋಟಿ 49 ಲಕ್ಷ 99,850 ರೂ. ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಗಳು ಪತ್ತೆಯಾಗಿವೆ. ಇದರಲ್ಲಿ 1 ಕೋಟಿ 4 ಲಕ್ಷ 69 ಸಾವಿರ ರೂ. ಮೌಲ್ಯದ ಸ್ಥಿರಾಸ್ತಿ (5 ನಿವೇಶನಗಳು, 3 ವಾಸದ ಮನೆಗಳು, 3 ಎಕರೆ ಕೃಷಿ ಭೂಮಿಯ ಕಾಗದಪತ್ರಗಳು) ಮತ್ತು 1 ಕೋಟಿ 45 ಲಕ್ಷ 30 ಸಾವಿರದ 850 ರೂ. ಮೌಲ್ಯದ ಚರಾಸ್ತಿ (7 ಲಕ್ಷ 20 ಸಾವಿರದ 850 ರೂ. ನಗದು, 85 ಲಕ್ಷ 60 ಸಾವಿರ ಮೌಲ್ಯದ ಚಿನ್ನಾಭರಣ, 12 ಲಕ್ಷ ಮೌಲ್ಯದ ವಾಹನಗಳು, 40 ಲಕ್ಷ 50 ಸಾವಿರ ಮೌಲ್ಯದ ಇತರೆ ಹಾಗೂ ಗೃಹಪಯೋಗಿ ವಸ್ತುಗಳು) ಸೇರಿವೆ.

ಮಂಡ್ಯ ಸಮುದಾಯ ಸಂಘಟನಾಧಿಕಾರಿ ಪುಟ್ಟಸ್ವಾಮಿ ಅವರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ನಡೆಸಿದ ಶೋಧದಲ್ಲಿ 4 ಕೋಟಿ 37 ಲಕ್ಷ 45 ಸಾವಿರ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿ ಪತ್ತೆಯಾಗಿದೆ. ಇದರಲ್ಲಿ 3 ಕೋಟಿ 48 ಲಕ್ಷ 45 ಸಾವಿರ ರೂ. ಮೌಲ್ಯದ ಸ್ಥಿರಾಸ್ತಿ (8 ನಿವೇಶನಗಳು, 2 ವಾಸದ ಮನೆಗಳು, 12 ಎಕರೆ ಕೃಷಿ ಜಮೀನು) ಮತ್ತು 89 ಲಕ್ಷ ರೂ. ಮೌಲ್ಯದ ಚರಾಸ್ತಿ (1 ಲಕ್ಷ 75 ಸಾವಿರ ನಗದು, 25 ಲಕ್ಷ ಮೌಲ್ಯದ ಚಿನ್ನಾಭರಣಗಳು, 33 ಲಕ್ಷ ಮೌಲ್ಯದ ವಾಹನಗಳು, 29 ಲಕ್ಷ 25 ಸಾವಿರ ಮೌಲ್ಯದ ಇತರೆ ವಸ್ತುಗಳು) ಸೇರಿವೆ.
ಯಾದಗಿರಿ ಕೃಷ್ಣ ಭಾಗ್ಯ ಜಲ ನಿಗಮದ ಮುಖ್ಯ ಎಂಜಿನಿಯರ್ ಪ್ರೇಮ್ ಸಿಂಗ್ ಅವರ ಮೇಲೆ ನಡೆದ ದಾಳಿ ವೇಳೆ 4 ಕೋಟಿ 7 ಲಕ್ಷ 65,552 ರೂ. ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಗಳು ಪತ್ತೆಯಾಗಿವೆ. ಇದರಲ್ಲಿ 2 ಕೋಟಿ 43 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ (4 ನಿವೇಶನಗಳು, 1 ವಾಸದ ಮನೆ, 24 ಎಕರೆ 30 ಗುಂಟೆ ಕೃಷಿ ಜಮೀನು ಪತ್ರ) ಹಾಗೂ 1 ಕೋಟಿ 64 ಲಕ್ಷದ 6,552 ರೂ. ಮೌಲ್ಯದ ಚರಾಸ್ತಿ (62 ಲಕ್ಷ ಬ್ಯಾಂಕ್ ಠೇವಣಿ, 50 ಲಕ್ಷ 75 ಸಾವಿರ ಮೌಲ್ಯದ ಚಿನ್ನಾಭರಣ, 42 ಲಕ್ಷ 48 ಸಾವಿರ ಬೆಲೆಬಾಳುವ ವಾಹನಗಳು, 8 ಲಕ್ಷ 83 ಸಾವಿರದ 552 ಇತರೆ ವಸ್ತುಗಳು) ಪತ್ತೆಯಾಗಿವೆ.
ಇದನ್ನೂ ಓದಿ : ‘ನಂದಿನಿ’ ತುಪ್ಪ ಕಲಬೆರಕೆ ಕೇಸ್ – ಸಿಸಿಬಿ ಪೊಲೀಸರಿಂದ ಕಿಂಗ್ ಪಿನ್ ದಂಪತಿ ಅರೆಸ್ಟ್!







