ಬೆಂಗಳೂರು : ರಾಜ್ಯದ ಪ್ರಸಿದ್ಧ ಹಾಲು ಒಕ್ಕೂಟದ ಬ್ರ್ಯಾಂಡ್ ನಂದಿನಿ ತುಪ್ಪದ ಹೆಸರಿನಲ್ಲಿ ಕಲಬೆರಕೆ ಮಾಡುತ್ತಿದ್ದ ಬೃಹತ್ ಜಾಲವನ್ನು CCB ಪೊಲೀಸರು ಬೇಧಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ CCB ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಕಲಬೆರಕೆ ಜಾಲದ ಕಿಂಗ್‌ಪಿನ್‌ಗಳಾದ ಗಂಡ ಮತ್ತು ಹೆಂಡತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬೆರಕೆ ಪ್ರಕರಣದ ಪ್ರಮುಖ ಆರೋಪಿಗಳಾದ ಶಿವಕುಮಾರ್ ಮತ್ತು ಅವರ ಪತ್ನಿ ರಮ್ಯಾ ಅವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ದಂಪತಿಯೇ ಕಲಬೆರಕೆ ಘಟಕವನ್ನು ನಡೆಸುತ್ತಿದ್ದರು ಎಂದು ತನಿಖೆಯಿಂದ ಬಯಲಾಗಿದೆ. ಸಿಸಿಬಿ ಪೊಲೀಸರು ನಡೆಸಿದ ದಾಳಿಯಲ್ಲಿ, ಈ ದಂಪತಿಗಳು ತಮಿಳುನಾಡಿನಲ್ಲಿ ನಕಲಿ ತುಪ್ಪ ತಯಾರಿಕಾ ಘಟಕವನ್ನು ನಡೆಸುತ್ತಿರುವುದು ಪತ್ತೆಯಾಗಿದೆ.

ದಾಳಿ ವೇಳೆ ತುಪ್ಪ ತಯಾರಿಸಲು ಬಳಸುತ್ತಿದ್ದ ದೊಡ್ಡ ಯಂತ್ರೋಪಕರಣಗಳು ಘಟಕದಲ್ಲಿ ಸಿಕ್ಕಿದೆ. ಈ ಘಟಕದಲ್ಲಿ ತಯಾರಿಸಿದ ನಕಲಿ ಉತ್ಪನ್ನಗಳನ್ನು ನಂದಿನಿ ಬೂತ್‌ಗಳ ಮೂಲಕವೇ ಗ್ಯಾಂಗ್ ಡಿಸ್ಟ್ರಿಬ್ಯೂಟ್ ಮಾಡ್ತಿತ್ತು. ಈ ಹಿಂದೆ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಇದೀಗ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಸ್ಮೃತಿ ಮಂಧನಾ ಪ್ರೀತಿಗೆ ದ್ರೋಹ ಮಾಡಿದ್ರಾ ಪಲಾಶ್ ಮುಚ್ಚಲ್? ಕೊನೆಗೂ ಲೀಕ್ ಆಯ್ತು ಆ ಸೀಕ್ರೇಟ್!







