ಸಿಲಿಕಾನ್ ಸಿಟಿಯಲ್ಲಿ 23 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ- ವಿದೇಶಿ ಪ್ರಜೆ ಅರೆಸ್ಟ್!

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾಗೆ ಭಾರೀ ಹೊಡೆತ ಬಿದ್ದಿದೆ. ನಗರದಲ್ಲಿ ಬರೋಬ್ಬರಿ $23$ ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಸಿಸಿಬಿ (CCB) ಪೊಲೀಸರು ಜಪ್ತಿ ಮಾಡಿದ್ದು, ಓರ್ವ ವಿದೇಶಿ ಪ್ರಜೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರು ಬಂಧಿಸಿರುವ ಆರೋಪಿಯನ್ನು ನೈಜೀರಿಯಾ ಪ್ರಜೆಯಾದ ಎಜಿಕೆ ನೈಗೂ ಓಕಾಫಾರ್ (42). ಈತನಿಂದ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿರುವ ಮಾದಕ ವಸ್ತುಗಳು. ಎಂಡಿಎಂಎ ಕ್ರಿಸ್ಟಲ್ 11.50 ಕೆಜಿ, 1040 ಎಕ್ಸ್‌ಟಸಿ ಫಿಲ್ಸ್. ವಶಪಡಿಸಿಕೊಂಡಿರುವ ಈ ಡ್ರಗ್ಸ್‌ಗಳ ಒಟ್ಟು ಮೌಲ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 23 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಬಂಧಿತ ಎಜಿಕೆ ನೈಗೂ ಓಕಾಫಾರ್, 2017 ರಲ್ಲಿ ಬ್ಯುಸಿನೆಸ್ ವೀಸಾ ಮೂಲಕ ಭಾರತಕ್ಕೆ ಬಂದಿದ್ದ. ಈತ ಬೆಂಗಳೂರಿನ ಬಾಗಲೂರು ಪ್ರದೇಶದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಆರೋಪಿಯು ದೆಹಲಿಯಿಂದ ಮಾದಕ ವಸ್ತುಗಳನ್ನು ತರಿಸಿಕೊಂಡು, ತನ್ನ ಬಾಡಿಗೆ ಮನೆಯಲ್ಲಿ ಸಂಗ್ರಹಿಸಿಡುತ್ತಿದ್ದ. ಕೇವಲ ಕರ್ನಾಟಕ ಮಾತ್ರವಲ್ಲದೆ, ನೆರೆಯ ರಾಜ್ಯಗಳಾದ ಚೆನ್ನೈ, ಹೈದರಾಬಾದ್ ಸೇರಿದಂತೆ ಹಲವು ಕಡೆಗಳಲ್ಲಿ ತನ್ನ ಪರಿಚಯಸ್ಥ ಪೆಡ್ಲರ್‌ಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡಿ ಡೀಲ್ ನಡೆಸುತ್ತಿದ್ದ.

ಎ.ಜಿ.ಕೆ. ನೈಗೂ ಓಕಾಫಾರ್‌ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ತೀವ್ರ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ : ಐತಿಹಾಸಿಕ ಅಯೋಧ್ಯೆಯಲ್ಲಿ ಧಾರ್ಮಿಕ ಧ್ವಜಾರೋಹಣ – ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ ಹಿನ್ನೆಲೆ ಸಂಭ್ರಮ!

Btv Kannada
Author: Btv Kannada

Read More