ಎಸ್. ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಮತ್ತು ಯುವ ನಟ ಶ್ರೇಯಸ್ ಮಂಜು ನಟನೆಯ ಬಹುನಿರೀಕ್ಷಿತ ಕನ್ನಡ ಸಿನಿಮಾ ‘ಮಾರುತ’ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ಭರ್ಜರಿ ಓಪನಿಂಗ್ ಪಡೆಯುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೇ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಲಬುರಗಿ, ವಿಜಯಪುರ ಸೇರಿದಂತೆ ಇಡೀ ಉತ್ತರ ಕರ್ನಾಟಕದ ಪ್ರಮುಖ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನಗಳ ಆರ್ಭಟ ಮುಂದುವರೆದಿದೆ.
ಮಾಸ್ ಆಕ್ಷನ್ ಮತ್ತು ಸಾಮಾಜಿಕ ಸಂದೇಶದ ಮಿಶ್ರಣವಿರುವ ‘ಮಾರುತ’ ಚಿತ್ರವು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ದುನಿಯಾ ವಿಜಯ್ ಅವರ ಖಡಕ್ ಪೊಲೀಸ್ ಪಾತ್ರ ಹಾಗೂ ಶ್ರೇಯಸ್ ಮಂಜು ಅವರ ಯುವಕನ ಪಾತ್ರಕ್ಕೆ ಉತ್ತರ ಕರ್ನಾಟಕದ ಜನರು ಅಭೂತಪೂರ್ವ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಮುಖ ಸಿಂಗಲ್ ಸ್ಕ್ರೀನ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ವಾರದ ದಿನಗಳಲ್ಲೂ ಟಿಕೆಟ್‌ಗಳಿಗಾಗಿ ಪ್ರೇಕ್ಷಕರು ಮುಗಿಬೀಳುತ್ತಿದ್ದಾರೆ. ಮೊದಲ ವಾರದ ಬಹುತೇಕ ಎಲ್ಲ ಶೋಗಳು ಮುಂಗಡವಾಗಿ ಬುಕಿಂಗ್ ಆಗಿದ್ದು, ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಉತ್ತರ ಕರ್ನಾಟಕದ ಪ್ರದೇಶವೊಂದರಲ್ಲೇ ‘ಮಾರುತ’ ಚಿತ್ರವು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ ಎಂದು ವಿತರಕರು ಹೇಳಿದ್ದಾರೆ. ಇದು ಚಿತ್ರಕ್ಕೆ ಈ ಭಾಗದಲ್ಲಿರುವ ದೊಡ್ಡ ಮಾರುಕಟ್ಟೆಯನ್ನು ಸೂಚಿಸುತ್ತದೆ. “ನಮ್ಮ ನಿರೀಕ್ಷೆಗೂ ಮೀರಿ ಉತ್ತರ ಕರ್ನಾಟಕದಲ್ಲಿ ಸಿನಿಮಾ ಓಡುತ್ತಿದೆ. ಟಿಕೆಟ್ ಸಿಗದೇ ಹಲವರು ವಾಪಸ್ ಹೋಗುತ್ತಿದ್ದಾರೆ. ಹಬ್ಬದ ವಾತಾವರಣದಂತೆ ಜನ ಚಿತ್ರಮಂದಿರಗಳಿಗೆ ಬರುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಪ್ರೇಕ್ಷಕರಿಗೆ ಕಂಟೆಂಟ್ ಮತ್ತು ಮನರಂಜನೆ ಇಷ್ಟವಾಗಿದೆ ಎಂಬುದಕ್ಕೆ ಇದು ಸಾಕ್ಷಿ.”

ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರು ಈ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಹೊಸ ಮತ್ತು ಹಳಬರ ಸಂಗಮವಾಗಿರುವ ‘ಮಾರುತ’ ದ ಕಥೆ, ನಿರೂಪಣೆ ಮತ್ತು ತಾಂತ್ರಿಕ ಅಂಶಗಳು ಜನರಿಗೆ ಹಿಡಿಸಿವೆ. ದುನಿಯಾ ವಿಜಯ್ ಹಾಗೂ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರ ಕಾಂಬಿನೇಷನ್ ಸೀನ್‌ಗಳಿಗೆ ಅಭಿಮಾನಿಗಳು ಜೋರಾದ ಸಿಳ್ಳೆ-ಚಪ್ಪಾಳೆಗಳ ಮೂಲಕ ರಿಯಾಕ್ಷನ್ ಕೊಟ್ಟಿದ್ದಾರೆ. ಸದ್ಯಕ್ಕೆ ‘ಮಾರುತ’ ಚಿತ್ರವು ಉತ್ತಮ ಕಲೆಕ್ಷನ್ ಜೊತೆಗೆ ಮುನ್ನುಗ್ಗುತ್ತಿದ್ದು, ಕನ್ನಡ ಚಿತ್ರರಂಗಕ್ಕೆ ದೊಡ್ಡ ಗೆಲುವನ್ನು ತಂದುಕೊಡುವ ಎಲ್ಲಾ ಲಕ್ಷಣಗಳನ್ನು ತೋರಿಸಿದೆ.

ಇದನ್ನೂ ಓದಿ : ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ಇನ್ನಿಲ್ಲ – ಮುಂಬೈ ಆಸ್ಪತ್ರೆಯಲ್ಲಿ ಕೊನೆಯುಸಿರು!







