ಬೆಳಗಾವಿ : ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಮತ್ತು ಸ್ಥಳೀಯ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಮಂತ್ರಿ ಸ್ಥಾನ ದೊರೆಯಬೇಕು ಎಂದು ಹಾರೈಸಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ವಿಶೇಷ ಪೂಜೆ ಮತ್ತು 101 ಈಡುಗಾಯಿಗಳನ್ನು ಒಡೆದು ಪ್ರಾರ್ಥನೆ ಸಲ್ಲಿಸಲಾಯಿತು.

ಬೈಲಹೊಂಗಲ ತಾಲೂಕು ಕಾಂಗ್ರೆಸ್ ಘಟಕದ ಕಾರ್ಯಕರ್ತರು ಈ ವಿಶೇಷ ಪ್ರಾರ್ಥನೆಯನ್ನು ಆಯೋಜಿಸಿದ್ದರು. ಬೈಲಹೊಂಗಲ ಪಟ್ಟಣದ ಐತಿಹಾಸಿಕ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ, ಕಾರ್ಯಕರ್ತರು ಡಿ.ಕೆ. ಶಿವಕುಮಾರ್ ಮತ್ತು ಮಹಾಂತೇಶ ಕೌಜಲಗಿ ಅವರ ಭಾವಚಿತ್ರಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. ಇದರ ಭಾಗವಾಗಿ 101 ಈಡುಗಾಯಿಗಳನ್ನು ಒಡೆದು ಪ್ರಾರ್ಥನೆ ಸಲ್ಲಿಸಲಾಯಿತು. ಬೈಲಹೊಂಗಲ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಮಿ ಮಕಾಂದರ್ ಅವರ ನೇತೃತ್ವದಲ್ಲಿ ಈ ಧಾರ್ಮಿಕ ವಿಧಿ ನೆರವೇರಿತು
.
ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಉತ್ಸುಕರಾಗಿದ್ದು, ಈ ಮೂಲಕ ತಮ್ಮ ನಾಯಕರ ಆಕಾಂಕ್ಷೆ ಈಡೇರಲಿ ಎಂದು ಸಾಮೂಹಿಕವಾಗಿ ದೇವರಲ್ಲಿ ಮೊರೆ ಹೋಗಿದ್ದಾರೆ.

ಇದನ್ನೂ ಓದಿ : ಪ್ರವಾಸಿಗರಿಲ್ಲದೇ ಬಣಗುಡುತ್ತಿದೆ ಬಂಡೀಪುರ – ಹುಲಿ ದಾಳಿ ಆತಂಕ.. ಸಫಾರಿ ಬಂದ್‌ನಿಂದ ಲಕ್ಷಾಂತರ ರೂ. ನಷ್ಟ!







