ಚಾಮರಾಜನಗರ : ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಈಗ ಪ್ರವಾಸಿಗರಿಲ್ಲದೇ ಬಣಗುಡುತ್ತಿದೆ. ಹುಲಿ ದಾಳಿಯ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಫಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದು, ಇದರಿಂದ ಇಲಾಖೆಗೆ ಮತ್ತು ಸ್ಥಳೀಯರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಸಫಾರಿ ಕ್ಯಾಂಪ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಈಗ ಸಂಪೂರ್ಣ ನಿಶ್ಯಬ್ಧ ಮತ್ತು ಮೌನಕ್ಕೆ ಜಾರಿವೆ. ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗಳು ಹೆಚ್ಚಾಗುತ್ತಿರುವುದರಿಂದ, ಕಳೆದ 15 ದಿನಗಳಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಸಫಾರಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ.

ಬಂಡೀಪುರ ಸಫಾರಿಯಿಂದ ಪ್ರತಿದಿನ ಇಲಾಖೆಗೆ ಸರಾಸರಿ ₹3 ಲಕ್ಷ ರೂಪಾಯಿಗಳಷ್ಟು ಆದಾಯ ಬರುತ್ತಿತ್ತು. ಸಫಾರಿ ಬಂದ್‌ನಿಂದಾಗಿ ಇಲಾಖೆಗೆ ಇದುವರೆಗೆ ಲಕ್ಷಾಂತರ ರೂಪಾಯಿಗಳಷ್ಟು ಆದಾಯ ನಷ್ಟವಾಗಿದೆ. ನಿಂತಲ್ಲೇ ನಿಂತಿರುವ ಸಫಾರಿ ವಾಹನಗಳು, ಪ್ರವಾಸಿಗರಿಲ್ಲದೇ ಮೌನವಾಗಿವೆ.

ಇದನ್ನೂ ಓದಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಸರಲ್ಲಿ ಕೋಟಿ ಕೋಟಿ ವಂಚನೆ – ‘ದತ್ತು ಪುತ್ರ’ ಎಂದುಕೊಂಡೇ ಮಕ್ಮಲ್ ಟೋಪಿ ಹಾಕ್ತಿದ್ದ ‘ಸುಜಯ್’ ಅರೆಸ್ಟ್!







