ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಸರಲ್ಲಿ ಕೋಟಿ ಕೋಟಿ ವಂಚನೆ – ‘ದತ್ತು ಪುತ್ರ’ ಎಂದುಕೊಂಡೇ ಮಕ್ಮಲ್ ಟೋಪಿ ಹಾಕ್ತಿದ್ದ ‘ಸುಜಯ್’ ಅರೆಸ್ಟ್​!

ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ‘ದತ್ತು ಪುತ್ರ’ನೆಂದು ಹೇಳಿಕೊಂಡು ದೇಶಾದ್ಯಂತ ರಾಜಕೀಯ ನಾಯಕರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೋಟಿಗಟ್ಟಲೆ ವಂಚನೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬೆಂಗಳೂರಿನ ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ವಂಚಕನ ಹೆಸರು ಸುಜಯ್ @ ಸುಜಯೇಂದ್ರ.

ಬಂಧಿತ ಸುಜಯೇಂದ್ರ, ತಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ‘ದತ್ತು ಪುತ್ರ’ ಎಂದು ಹಾಗೂ ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ (PMO) ಉನ್ನತ ಅಧಿಕಾರಿಯೆಂದು ಜನರನ್ನು ನಂಬಿಸುತ್ತಿದ್ದ. ಕೇವಲ ಅಮಿತ್ ಶಾ ಹೆಸರಷ್ಟೇ ಅಲ್ಲದೆ, ದೇಶದ ವಿವಿಧ ರಾಜ್ಯಗಳ ಪ್ರಭಾವಿ ರಾಜಕೀಯ ನಾಯಕರುಗಳ ಹೆಸರನ್ನು ಬಳಸಿಕೊಂಡು ಈತ ವಂಚನೆ ಜಾಲವನ್ನು ನಡೆಸುತ್ತಿದ್ದ. ಈತ ಜಮ್ಮು ಕಾಶ್ಮೀರದ ವೈದ್ಯರಿಂದ ಬರೋಬ್ಬರಿ ₹ 2.7 ಕೋಟಿ ಹಣವನ್ನು ವಸೂಲಿ ಮಾಡಿದ್ದಾನೆ. ದೇವನಹಳ್ಳಿಯ ಬಳಿ ವಿಲ್ಲಾ ಮಾದರಿಯಲ್ಲಿ ಅತ್ಯಾಧುನಿಕ ಆಯುರ್ವೇದ ಆಸ್ಪತ್ರೆ ತೆರೆಯಲು ಅವಕಾಶ ಮಾಡಿಕೊಡುವುದಾಗಿ ನಂಬಿಸಿ ಹಣ ಪಡೆದಿದ್ದಾನೆ. ವಂಚಕ ಸುಜಯ್, ಈ ಹಿಂದೆ ಉಪಮುಖ್ಯಮಂತ್ರಿ ಜೊತೆಯಲ್ಲಿ ವೇದಿಕೆಯನ್ನು ಹಂಚಿಕೊಂಡಿರುವ ವಂಚಕ ಸುಜಯೇಂದ್ರ.

ವಂಚನೆಗೊಳಗಾದ ಜಮ್ಮು ಕಾಶ್ಮೀರದ ವೈದ್ಯರು ನೀಡಿದ ದೂರಿನನ್ವಯ, ಬೆಂಗಳೂರಿನ ವಿಜಯನಗರದ ನಿವಾಸಿಯಾಗಿರುವ ಸುಜಯೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಸುಜಯೇಂದ್ರನನ್ನು ಬಂಧಿಸಿ ತನಿಖೆ ನಡೆಸಿದಾಗ ಆತನ ವಂಚಕನ ಕರಾಳ ಮುಖ ಅನಾವರಣಗೊಂಡಿದೆ. ಈತ ಈಗಾಗಲೇ ಎರಡು ಬಾರಿ ಜೈಲಿಗೆ ಹೋಗಿ ಬಂದಿರುವ ವಿಚಾರ ದೃಢಪಟ್ಟಿದೆ. ಅಲ್ಲದೆ, ಈತನ ವಿರುದ್ಧ 4 ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ : ‘ಡಿಕೆ ಶಿವಕುಮಾರ್​ ಮುಂದಿನ ಮುಖ್ಯಮಂತ್ರಿ ಆಗ್ತಾರೆ’ – ರಾಜ್ಯದ ಐತಿಹಾಸಿಕ ಹುಲಿಗೆಮ್ಮ ದೇವಿ ಆರಾಧಕಿ ಭವಿಷ್ಯ!

Btv Kannada
Author: Btv Kannada

Read More