ಬೆಂಗಳೂರು : ರಾಜ್ಯ ಒಕ್ಕಲಿಗರ ಸಂಘದ ಪ್ರತಿಷ್ಠಿತ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಬಲಿತ ಬಣವು ಭಾರಿ ಜಯ ಸಾಧಿಸುವ ಮೂಲಕ ಸಂಘದ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್. ಶ್ರೀನಿವಾಸ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಗೆಲುವು ಡಿಕೆಶಿ ಬಣದ ಬಲವನ್ನು ಒಕ್ಕಲಿಗ ಸಮುದಾಯದ ವೇದಿಕೆಯಲ್ಲೂ ಮತ್ತೊಮ್ಮೆ ಸಾಬೀತುಪಡಿಸಿದೆ. ಸಮಗ್ರ ಪದಾಧಿಕಾರಿಗಳ ಪಟ್ಟಿ ಇಲ್ಲಿದೆ.

ಒಕ್ಕಲಿಗರ ಸಂಘದ ಚುನಾವಣೆಗಳಲ್ಲಿ ಸದಾ ರಾಜಕೀಯ ನಾಯಕರ ಬಣಗಳ ಪ್ರಭಾವ ಪ್ರಬಲವಾಗಿರುತ್ತದೆ. ಈ ಚುನಾವಣೆಯಲ್ಲಿ ಡಿಕೆಶಿ ಬಣದ ಭರ್ಜರಿ ಗೆಲುವು, ರಾಜ್ಯ ರಾಜಕಾರಣದಲ್ಲಿ ಅವರ ಹಿಡಿತವನ್ನು ಮತ್ತು ಸಮುದಾಯದ ಮೇಲಿನ ಪ್ರಭಾವವನ್ನು ಸೂಚಿಸುತ್ತದೆ.ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿಯು ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆ, ಸಮುದಾಯದ ಅಭಿವೃದ್ಧಿ ಮತ್ತು ಮೀಸಲಾತಿ ಹೋರಾಟದಂತಹ ಪ್ರಮುಖ ವಿಷಯಗಳನ್ನು ಮುನ್ನಡೆಸಬೇಕಿದೆ.
ಇದನ್ನೂ ಓದಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪತ್ರಕ್ಕೆ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ – ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ರಾಜಕೀಯ ಮಾಡದಿರುವಂತೆ ಸಲಹೆ!







