ಡಿಕೆಶಿ ಮುಖ್ಯಮಂತ್ರಿಯಾಗಲು ಹರಕೆ – ದೇವರಗುಡ್ಡದಲ್ಲಿ ಅಭಿಮಾನಿಯಿಂದ ‘ಚಾಟಿ ಸೇವೆ’!

ಹಾವೇರಿ : ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ಅವರಿಗೆ ಆ ಸ್ಥಾನ ದೊರಕಲಿ ಎಂದು ಹಾರೈಸಿ, ಅವರ ಓರ್ವ ಕಟ್ಟಾ ಅಭಿಮಾನಿ ವಿಶಿಷ್ಟ ಹರಕೆಯನ್ನು ನೆರವೇರಿಸಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿರುವ ಪ್ರಸಿದ್ಧ ಮಾಲತೇಶ್ ಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಬಸಾಪುರ ಗ್ರಾಮದ ಮಣಿಕಂಠ ಬಳ್ಳಾರಿ ಎಂಬ ಯುವಕ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಪ್ರಾರ್ಥಿಸಿದ್ದಾನೆ.

ಬಸಾಪುರ ಗ್ರಾಮದ ಯುವಕ ಮಣಿಕಂಠ ಬಳ್ಳಾರಿ ಅವರು ದೇವರ ಮುಂದೆ ‘ಚಾಟಿ ಸೇವೆ’ ನೆರವೇರಿಸಿದ್ದಾರೆ. ಈ ದೇವಸ್ಥಾನದ ಸಂಪ್ರದಾಯದ ಪ್ರಕಾರ, ಕಠಿಣ ‘ಚಾಟಿ ಸೇವೆ’ ಕೈಗೊಂಡರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ. ಯುವಕ ಮಣಿಕಂಠ ಅವರು ಸಾರ್ವಜನಿಕವಾಗಿ ಚಾಟಿ ಸೇವೆ ಸಲ್ಲಿಸುವ ಮೂಲಕ ತಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಪರವಾಗಿ ದೇವರ ಮೊರೆ ಹೋಗಿದ್ದಾರೆ.

ದೇವರಗುಡ್ಡ ಮಾಲತೇಶ್ ಸ್ವಾಮಿ ದೇಗುಲವು ತನ್ನ ಇತಿಹಾಸದ ಜೊತೆಗೆ ಪ್ರತಿ ವರ್ಷ ನಡೆಯುವ ಭವಿಷ್ಯವಾಣಿಯಿಂದಾಗಿ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಇಲ್ಲಿಯಾಗುವ ಕಾರ್ಣಿಕ ರಾಜಕೀಯ ಸೇರಿದಂತೆ ರಾಜ್ಯದ ಭವಿಷ್ಯವನ್ನು ನುಡಿಯುತ್ತದೆ ಎಂಬ ನಂಬಿಕೆಯಿದೆ. ಈ ಘಟನೆಯು ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆಗೆ ಸಂಬಂಧಿಸಿದಂತೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಚರ್ಚೆಗಳ ನಡುವೆಯೇ ಭಕ್ತರ ವಲಯದಲ್ಲಿರುವ ಭಾವನಾತ್ಮಕ ಬೆಂಬಲವನ್ನು ಎತ್ತಿ ತೋರಿಸಿದೆ.

ದೇವರಗುಡ್ಡ ಮಾಲತೇಶ್ ಸ್ವಾಮಿ ದೇಗುಲವು ತನ್ನ ಇತಿಹಾಸದ ಜೊತೆಗೆ ಪ್ರತಿ ವರ್ಷ ನಡೆಯುವ ಭವಿಷ್ಯವಾಣಿಯಿಂದಾಗಿ ಪ್ರಸಿದ್ಧವಾಗಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ‘ಕಾರ್ಣಿಕ’ (ಭವಿಷ್ಯವಾಣಿ) ರಾಜ್ಯದ ರಾಜಕೀಯ ಸೇರಿದಂತೆ ಮುಂದಿನ ವರ್ಷದ ಭವಿಷ್ಯವನ್ನು ನುಡಿಯುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ : ಹೊಸಪೇಟೆಯಲ್ಲಿ ನಿಯಮ ಮೀರಿದ ರಸ್ತೆ ಡಾಂಬರೀಕರಣ – ‘ಗುಣಮಟ್ಟದಲ್ಲಿ ರಾಜಿ ಇಲ್ಲ’ ಎಂದ ಶಾಸಕ ಗವಿಯಪ್ಪ!

Btv Kannada
Author: Btv Kannada

Read More