ಸ್ಯಾಂಡಲ್​ವುಡ್​ನಲ್ಲಿ ಎಸ್​. ನಾರಾಯಣ್ ಮತ್ತೆ ಕಮಾಲ್ – ಶ್ರೇಯಸ್ ಮಂಜು, ದುನಿಯಾ ವಿಜಯ್ ಸಿನಿಮಾ ‘ಮಾರುತ’ ಸೂಪರ್ ಹಿಟ್!

ಎಸ್. ನಾರಾಯಣ್ ನಿರ್ದೇಶನದ, ಶ್ರೇಯಸ್ ಮಂಜು ಹಾಗೂ ಬೃಂದಾ ಆಚಾರ್ಯ ನಟನೆಯ ಬಹುನಿರೀಕ್ಷಿತ ‘ಮಾರುತ’ ಸಿನಿಮಾ ನಿನ್ನೆ ರಾಜ್ಯಾದ್ಯಂತ ರಿಲೀಸ್ ಆಗಿದೆ. ಈ ಸಸ್ಪೆನ್ಸ್ ಥ್ರಿಲ್ಲರ್‌ ಚಿತ್ರದಲ್ಲಿ ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಬಿಡುಗಡೆಯಾದ ಮೊದಲ ದಿನವೇ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಕೆ. ಮಂಜು ಹಾಗೂ ರಮೇಶ್ ಯಾದವ್ ನಿರ್ಮಾಣದ ‘ಮಾರುತ’ ಫ್ಯಾಮಿಲಿ ನೋಡುವಂತ ಸಿನಿಮಾವಾಗಿದ್ದು, ಈ ಚಿತ್ರ ಎಲ್ಲೆಡೆ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಶ್ರೇಯಸ್ ಮಂಜು ಹಾಗೂ ಬೃಂದಾ ಆಚಾರ್ಯ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದು, ‘ಮಾರುತ’ ಚಿತ್ರದ ಕಥಾ ನಿರೂಪಣೆ ಬಹಳ ಭಿನ್ನವಾಗಿದೆ. ಸೋಶಿಯಲ್ ಮೀಡಿಯಾಗಳ ಬಳಕೆಯಲ್ಲಿ ಎಚ್ಚರ ತಪ್ಪಿದರೆ ಏನೆಲ್ಲಾ ಅನಾಹುತಗಳಾಗಬಹುದು ಎಂಬುದು ಚಿತ್ರದ ಒಂದೆಳೆ ಕಥೆ.

ಈಶನಾಗಿ ಶ್ರೇಯಸ್ ಮಂಜು ಕಾಣಿಸಿಕೊಂಡಿದ್ದು, ಇದು ಥ್ರಿಲ್ಲರ್‌, ಸಸ್ಪೆನ್ಸ್‌, ಡ್ರಾಮಾ ಸಿನಿಮಾವಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಫಿದಾ ಆಗಿದ್ದು, ಕನ್ನಡ ಸಿನಿ ಲೋಕದಲ್ಲಿ ಮಾರುತ ಸಿನಿಮಾ ಮತ್ತೊಂದು ಸೂಪರ್ ಹಿಟ್ ಲಿಸ್ಟ್​ಗೆ ಸೇರಿದೆ.

ನಿರ್ದೇಶಕ ಎಸ್‌. ನಾರಾಯಣ್‌ ಅವರು ಈ ಹಿಂದೆ 5ಡಿ ಎಂಬ ಥ್ರಿಲ್ಲರ್‌ ಸಿನಿಮಾ ಮಾಡಿದ್ದರು. ಈಗ ಮಾರುತ ಹೆಸರಿನ ಮತ್ತೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಮೊದಲು ಬೆಂಗಳೂರಿನಲ್ಲಿ ನಡೆಯುವ ಕ್ರೈಮ್‌ಗಳ ಬಗ್ಗೆ ಹೇಳುತ್ತಾ ತೆರೆದುಕೊಳ್ಳುವ ಸಿನಿಮಾ, ನಂತರ ಮಲೆನಾಡಿಗೆ ಶಿಫ್ಟ್‌ ಆಗುತ್ತದೆ. ಹೀರೋಗಾಗಿ ಕಷ್ಟಪಡುವ ಅಪ್ಪ – ಅಮ್ಮ, ಎದುರು ಮನೆಯ ಹುಡುಗಿ ಮೇಲೆ ಪ್ರೇಮ, ಎಲ್ಲ ಟೈಮ್‌ನಲ್ಲೂ ಜೊತೆಗಿರುವ ಮಾಮಾ.. ಚಿಕ್ಕಮಗಳೂರಿನಲ್ಲಿ ಸಂಚರಿಸುವ ಕಥೆ ಇದ್ದಕ್ಕಿದ್ದಂತೆಯೇ ತಿರುವು ಪಡೆದುಕೊಳ್ಳುತ್ತದೆ. ಊರೂರು ಸುತ್ತುತ್ತ ಎಲ್ಲೆಲ್ಲೋ ಸಾಗುವ ಮಾರುತ ಅಂತಿಮವಾಗಿ ಸಂದೇಶದೊಂದಿಗೆ ಮುಕ್ತಾಯಗೊಳ್ಳುತ್ತದೆ.

ತಾರಾ, ಶರತ್ ಲೋಹಿತಾಶ್ವ, ಕಲ್ಯಾಣಿ, ಪ್ರಮೋದ್‌ ಶೆಟ್ಟಿ, ರಂಗಾಯಣ ರಘು, ಮಂಜು ಪಾವಗಡ, ಗಿರಿ ಶಿವಣ್ಣ, ಸುಜಯ್‌ ಶಾಸ್ತ್ರೀ ಸೇರಿದಂತೆ ಇನ್ನೂ ಅನೇಕ ಅನುಭವಿ ಕಲಾವಿದರು ಚಿತ್ರದಲ್ಲಿದ್ದಾರೆ. ಒಂದು ದೃಶ್ಯದಲ್ಲಿ ರವಿಚಂದ್ರನ್‌ ಮತ್ತು ನಿಶ್ವಿಕಾ ನಾಯ್ಡು ಕೂಡ ಬಂದುಹೋಗುತ್ತಾರೆ.

ಇದನ್ನೂ ಓದಿ : ಸಿಎಂ ಬದಲಾವಣೆ ಚರ್ಚೆ ಜೋರು – ಡಿಕೆ ಬ್ರದರ್ಸ್‌ ಭೇಟಿಯಾದ ಹಾವೇರಿ ಕಾಂಗ್ರೆಸ್ ಶಾಸಕರು!

Btv Kannada
Author: Btv Kannada

Read More