ಸಿಎಂ ಬದಲಾವಣೆ ಚರ್ಚೆ ಜೋರು – ಡಿಕೆ ಬ್ರದರ್ಸ್‌ ಭೇಟಿಯಾದ ಹಾವೇರಿ ಕಾಂಗ್ರೆಸ್ ಶಾಸಕರು!

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ CM ಬದಲಾವಣೆಯ ವಿಚಾರ ಮತ್ತೆ ಜೋರಾಗಿದ್ದು, ಇದರ ಮಧ್ಯೆ ಹಾವೇರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಅವರನ್ನು ಭೇಟಿ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಕಾಂಗ್ರೆಸ್ ಶಾಸಕರ ಈ ನಡೆ ತೀವ್ರ ಕುತೂಹಲಕ್ಕೆ ಮೂಡಿಸಿದೆ.

ನಿನ್ನೆ ತಡರಾತ್ರಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಈ ಮಹತ್ವದ ಭೇಟಿ ನಡೆದಿದೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಶಾಸಕ ಯಾಸೀರ್ ಖಾನ್ ಪಠಾಣ್, ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ್ ಮಾನೆ, ರಾಣೇಬೆನ್ನೂರು ಕ್ಷೇತ್ರದ ಶಾಸಕ ಪ್ರಕಾಶ್ ಕೋಳಿವಾಡ್ ಭೇಟಿ ಮಾಡಿದ್ದಾರೆ.

ಇನ್ನು ಹಾವೇರಿ ಲೋಕಸಭಾ ಕ್ಷೇತ್ರದ ‘ಕೈ’ ಅಭ್ಯರ್ಥಿ ಆನಂದ್, ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣ, ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಕೂಡ ಭೇಟಿ ಮಾಡಿದ್ದಾರೆ. ಬ್ರದರ್ಸ್ ಭೇಟಿಯಾದ ವಿಚಾರ ಈಗ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ 7.11 ಕೋಟಿ ರಾಬರಿ ಕೇಸ್ – BTV ಯಲ್ಲಿ ಆರೋಪಿಗಳ ಎಕ್ಸ್​​ಕ್ಲೂಸಿವ್ ಫೋಟೋಸ್!

Btv Kannada
Author: Btv Kannada

Read More