ಬೆಂಗಳೂರಲ್ಲಿ 7.11 ಕೋಟಿ ರಾಬರಿ ಕೇಸ್ – BTV ಯಲ್ಲಿ ಆರೋಪಿಗಳ ಎಕ್ಸ್​​ಕ್ಲೂಸಿವ್ ಫೋಟೋಸ್!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನಡೆದ 7.11 ಕೋಟಿ ರಾಬರಿ ಪ್ರಕರಣ ದೇಶಾದ್ಯಂತ ಭಾರೀ ಸದ್ದು ಮಾಡಿದೆ. ಈ ದರೋಡೆ ಕೇಸ್​ನ ರಹಸ್ಯವನ್ನು ಪೊಲೀಸರು ಬಯಲು ಮಾಡಿದ್ದು, ಖಾಕಿ ಟೀಂ ತನಿಖೆ ಮುಂದುವರೆಸಿದೆ. ಇದೀಗ ರಾಬರಿ ಮಾಡಿದ್ದ ಖರ್ತನಾಕ್ ಗ್ಯಾಂಗ್​ನ ಎಲ್ಲಾ ಆರೋಪಿಗಳ ಎಕ್ಸ್​​ಕ್ಲೂಸಿವ್ ಪೊಟೋಸ್ ಬಿಟಿವಿಗೆ ಲಭ್ಯವಾಗಿದೆ.

ದೊಡ್ಡ ರಾಬರಿ ಪ್ರಕರಣ ಸಂಬಂಧ ಅಣ್ಣಪ್ಪನಾಯ್ಕ್, ಝೇವಿಯರ್, ಗೋಪಿ, ನೆಲ್ಸನ್, ನವೀನ್ ಅರೆಸ್ಟ್ ಆಗಿದ್ದು, ಉಳಿದ ಆರೋಪಿಗಳಾದ ರವಿ, ರಾಕೇಶ್, ಜಿತೇಶ್, ದಿನೇಶ್ ನಾಪತ್ತೆಯಾಗಿದ್ದಾರೆ. ಸದ್ಯ ಬಂಧಿತ ಐವರು ಸೇರಿ ನಾಪತ್ತೆಯಾಗಿರೋ ನಾಲ್ವರ ಪೊಟೋಸ್ ಸಿಕ್ಕಿದೆ. 7.11 ಕೋಟಿ ರಾಬರಿ ಪ್ರಕರಣ ಸಂಬಂಧ 5.60 ಕೋಟಿಗೂ ಅಧಿಕ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಆರೋಪಿ ಝೇವಿಯರ್​ನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ತಮಿಳುನಾಡಿನಿಂದ ಬೆಂಗಳೂರಿಗೆ ಝೇವಿಯರ್ ಕರೆತಂದಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಝೇವಿಯರ್ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಝೇವಿಯರ್​ ಕುಪ್ಪಂನಲ್ಲಿ ಇನ್ನೋವಾ ಬಿಟ್ಟು ವ್ಯಾಗನಾರ್ ಕಾರಲ್ಲಿ ಎಸ್ಕೇಪ್ ಆಗಿದ್ದ. ಬಾಕ್ಸ್ ಓಪನ್ ಮಾಡಿ ಝೇವಿಯರ್ ಹಣವನ್ನು ಚೀಲದಲ್ಲಿ ತೆಗೆದುಕೊಂಡು ಹೋಗಿದ್ದ.

ಇದನ್ನೂ ಓದಿ : ಶಿವಮೊಗ್ಗ ಟ್ರಯಲ್ ಬಾಂಬ್ ಸ್ಫೋಟ ಕೇಸ್ – NIA ವಿಶೇಷ ನ್ಯಾಯಾಲಯದಿಂದ ಇಬ್ಬರು ಅಪರಾಧಿಗಳಿಗೆ ಶಿಕ್ಷೆ ಪ್ರಕಟ!

Btv Kannada
Author: Btv Kannada

Read More