ಪ್ರೊಫೈಲ್ ಫೋಟೋಗೆ ಫಿದಾ ಆಗಿ ಫಜೀತಿಗೆ ಸಿಲುಕಿದ ಯುವತಿ – 7-8 ಲಕ್ಷ ರೂ ಹಣ, 500 ಗ್ರಾಂ ಚಿನ್ನ ತೆಗೊಂಡು ವಂಚಿಸಿದ ಆರೋಪಿ ಅರೆಸ್ಟ್!

ಬೆಂಗಳೂರು : ಪ್ರೊಫೈಲ್ ಫೋಟೋಗಳನ್ನು ನಂಬಿ ಪ್ರೀತಿಯ ಬಲೆಗೆ ಬಿದ್ದ ಯುವತಿಯೋರ್ವಳು ಫಜೀತಿಗೆ ಸಿಲುಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವಕನ ಸುಳ್ಳು ಪ್ರೀತಿಯ ಮಾತುಗಳಿಗೆ ಮರುಳಾದ MBBS ವಿದ್ಯಾರ್ಥಿನಿಯೊಬ್ಬಳು ಬರೋಬ್ಬರಿ 500 ಗ್ರಾಂ ಚಿನ್ನ ಮತ್ತು 7-8 ಲಕ್ಷ ರೂ. ನಗದು ಕಳೆದುಕೊಂಡಿದ್ದಾಳೆ.

ಜನಾರ್ದನ ಎಂಬಾತ ಯಾರದ್ದೋ ಆಕರ್ಷಕ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಾಕಿಕೊಂಡು, MBBS ವಿದ್ಯಾರ್ಥಿನಿಯೊಂದಿಗೆ ಚಾಟ್ ಶುರು ಮಾಡಿದ್ದ. ಆಕೆಯ ಬಳಿ ಜನಾರ್ದನ ನಾನು ದುಬೈ ಮೂಲದ ದೊಡ್ಡ ಬ್ಯುಸಿನೆಸ್ ಮ್ಯಾನ್ ಎಂದು ಹೇಳಿಕೊಂಡಿದ್ದ. ನಂತರ ತನ್ನ ಬ್ಯುಸಿನೆಸ್ ಪಾತಾಳಕ್ಕೆ ಕುಸಿದಿದೆ, ಹಾಗಾಗಿ ಬ್ಯುಸಿನೆಸ್​ಗೆ ಸ್ವಲ್ಪ ಅಮೌಂಟ್ ಬೇಕು ಇದೀಗ ಬೆಂಗ್ಳೂರಲ್ಲೇ ವಾಸವಾಗಿದ್ದೇನೆ ಎಂದು ಕಥೆ ಕಟ್ಟಿದ್ದ.

ಹಣ ಸಿಗಬಹುದಾ ‘ಮೇರಿ ಕಾದಲ್’ ಅಂತ ಜನಾರ್ದನ ವಾಟ್ಸಪ್ ಕಾಲ್ ಮಾಡಿದ್ದ. ಜನಾರ್ದನನ ವಾಯ್ಸ್ ಮತ್ತು ಇನ್‌ಸ್ಟಾ ಫೋಟೋ ನೋಡಿ ವಿದ್ಯಾರ್ಥಿನಿ ಆಳವಾದ ಪ್ರೀತಿಯಲ್ಲಿ ಮುಳುಗಿ ಹೋಗಿದ್ದಳು. ಜನಾರ್ದನ ನನ್ನ ಕಾರ್ ಡ್ರೈವರ್ ಕಳುಹಿಸಿಕೊಡ್ತೀನಿ ಅವ್ನ ಕೈಯಲ್ಲೇ ಹಣ ಕೊಡು ಎಂದಿದ್ದ. ಹೀಗೆ ಹೇಳಿ ಹೇಳಿನೇ 500 ಗ್ರಾಂ ಚಿನ್ನ & 7-8 ಲಕ್ಷ ಹಣವನ್ನೂ ಜನಾರ್ದನ ಪಡೆದಿದ್ದ.

ಕಳೆದೆರಡು ತಿಂಗಳ ಹಿಂದೆ MBBS ವಿದ್ಯಾರ್ಥಿನಿಯ ಬರ್ತಡೇ ಇರುತ್ತೆ. ಸಣ್ಣದೊಂದು ಗಿಫ್ಟ್ ಜನಾರ್ದನ ತನ್ನ ಡ್ರೈವರ್ ಬಳಿ ಕಳುಹಿಸ್ತೀನಿ ಅಂದಿದ್ದ. ಆದ್ರೆ, ಪ್ರತೀ ಬಾರಿಯೂ ಡ್ರೈವರ್ ರೀತಿ ಬರ್ತಿದ್ದವ್ನು ಜನಾರ್ದನನೇ ಆಗಿದ್ದ. ಇತ್ತೀಚೆಗೆ ಜನಾರ್ದನನ ಮೇಲೆ ಡೌಟ್ ಬಂದ MBBS ವಿದ್ಯಾರ್ಥಿನಿ ಭೇಟಿಗೆ ಒತ್ತಾಯಿಸಿದ್ದಾಳೆ. 420 ಜನಾರ್ದನನ ಬಳಿ ನೇರಾನೇರ ಸಿಗುವಂತೆ MBBS ವಿದ್ಯಾರ್ಥಿನಿ ಒತ್ತಾಯಿಸಿದ್ದಳು. ನಂತರ ಜನಾರ್ದನ ಮೊಬೈಲ್ ಸ್ವಿಚ್ ಆಫ್ ಮಾಡ್ಕೊಂಡು ತಣ್ಣಗೆ ಜಾರಿಕೊಂಡಿದ್ದ. ಇದರಿಂದ ನೊಂದ MBBS ವಿದ್ಯಾರ್ಥಿನಿ 2-3 ಬಾರಿ ಸೂಸೈಡ್​ಗೆ ಯತ್ನಿಸಿದ್ದಾಳೆ.

ಇದೆಲ್ಲಾ ತಿಳಿದ ವಿದ್ಯಾರ್ಥಿನಿ ಪೋಷಕರು ಜ್ಞಾನಭಾರತಿ ಠಾಣೆಯಲ್ಲಿ‌ ದೂರು ನೀಡಿದ್ದು, ಪ್ರಕರಣವನ್ನ ಕೈಗೆತ್ತಿಕೊಂಡ ಪೊಲೀಸರು ಇದೀಗ ಜನಾರ್ದನನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಬೆಟ್ಟಿಂಗ್​ಗೆ ಹಣ ಬೇಕಿತ್ತು ಅದಕ್ಕೆ ಲವ್ ಲೈಟ್ ಹಚ್ಚಿ ಹಣ ಕಿತ್ತೆ ಎಂದಿದ್ದಾನೆ.

ಇದನ್ನೂ ಓದಿ : ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಚಿವ ಚೆಲುವರಾಯಸ್ವಾಮಿ ಪುತ್ರ ಆಯ್ಕೆ!

Btv Kannada
Author: Btv Kannada

Read More