ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ನಡೆದ 7.11 ಕೋಟಿ ದರೋಡೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈಗಾಗಲೇ ದರೋಡೆಯ ಹಿಂದೆ ಮಾಸ್ಟರ್ ಮೈಂಡ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಅನ್ನು ಪೊಲೀಸರು ಬಂಧಿಸಿದ್ದು, ಇದೀಗ ಕಿಂಗ್ ಪಿನ್ ರವಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ದರೋಡೆ ಕಿಂಗ್ ಪಿನ್ ರವಿ ಬಗ್ಗೆ ಪತ್ನಿಯಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ರವಿ ಪತ್ನಿ ಎರಡೂವರೆ ವರ್ಷದ ಮಗುವಿನ ಜೊತೆಗೆ ಠಾಣೆಗೆ ಆಗಮಿಸಿದ್ದರು. ಕಿಂಗ್ ಪಿನ್ ರವಿಗಾಗಿ ಪೊಲೀಸರು ನಿನ್ನೆ ರಾತ್ರಿ ಕಮ್ಮನಹಳ್ಳಿ, ಹೆಣ್ಣೂರು ಸುತ್ತಾ ಹುಡುಕಾಟ ನಡೆಸಿದ್ದು, ರಾತ್ರಿ 12 ರಿಂದ ಬೆಳಗಿನ ಜಾವ 3 ಗಂಟೆವರೆಗೆ ಹಂಟಿಂಗ್ ನಡೆಸಿದ್ದರು. ಖಾಕಿ ಟೀಂ ಸುಮಾರು 80 ಮನೆಗಳ ತಲಾಷ್ ನಡೆಸಿದ್ದು, ಈ ವೇಳೆ ರವಿ ಪತ್ನಿ ಮನೆಯಲ್ಲಿರೋದು ಪತ್ತೆಯಾಗಿದೆ.
ರವಿ ಪತ್ನಿಯನ್ನು ಪೊಲೀಸರು ರಾತ್ರಿಯೇ ಕರೆತಂದು ವಿಚಾರಣೆ ನಡೆಸಿದ್ದಾರೆ. ಪತಿ ಕೃತ್ಯದಲ್ಲಿ ತಾನೂ ಭಾಗಿಯಾಗಿರೋದನ್ನು ರವಿ ಪತ್ನಿ ಒಪ್ಪಿಕೊಂಡಿದ್ದಾರೆ. ನಾನೇ ಠಾಣೆಗೆ ಬರಬೇಕು ಎಂದುಕೊಂಡಿದ್ದೆ, ನೀವೆ ಬಂದ್ರಿ ಎಂದು ಕಿಂಗ್ಪಿನ್ ಪತ್ನಿ ಪೊಲೀಸರ ಜೊತೆಗೆ ಬಂದಿದ್ದರು.
ರವಿ ಬೆಂಗಳೂರಲ್ಲಿ ಟ್ರಾವೆಲ್ಸ್ ನಡೆಸುತ್ತಿದ್ದ. ಲಾಸ್ ಆಗಿ ಕೆಲಸ ಇಲ್ಲದೇ ಮನೆಯಲ್ಲಿದ್ದ, ಹಾಗಾಗಿ ಏರಿಯಾ ಹುಡುಗರನ್ನ ಸೇರಿಸಿ ರಾಬರಿ ಪ್ಲ್ಯಾನ್ ರೂಪಿಸಿದ್ದ ಎಂದು ದರೋಡೆ ಕಿಂಗ್ ಪಿನ್ ರವಿ ಪತ್ನಿ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.
ಇದನ್ನೂ ಓದಿ : ನೆಲಮಂಗಲ : ಬೈಕ್ನಲ್ಲಿ ಹೋಗುತ್ತಿದ್ದಾಗ ಫ್ಲೆಕ್ಸ್ ಬಿದ್ದು ಯುವಕ ಸಾವು!







