ನೆಲಮಂಗಲ : ಬೈಕ್​ನಲ್ಲಿ ಹೋಗುತ್ತಿದ್ದಾಗ ಫ್ಲೆಕ್ಸ್ ಬಿದ್ದು ಯುವಕ ಸಾವು!

ನೆಲಮಂಗಲ : ರಸ್ತೆಯಲ್ಲಿ ಹಾಕಿದ್ದ ಫ್ಲೆಕ್ಸ್​ನಿಂದ ಯುವಕನೋರ್ವ ಜೀವ ಕಳೆದುಕೊಂಡಿದ್ದಾನೆ. ಬೈಕ್​ನಲ್ಲಿ ಹೋಗುತ್ತಿದ್ದಾಗ ಫ್ಲೆಕ್ಸ್ ತಗುಲಿ ರಸ್ತೆಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ನೆಲಮಂಗಲ ನಗರದ ಬೆಸ್ಕಾಂ ಕಚೇರಿಯ ಮುಂದೆ ನಡೆದಿದೆ. 27 ವರ್ಷದ ತೇಜಸ್ ಗೌಡ ಮೃತ ಯುವಕ.

ಜರ್ಮನಿಯಲ್ಲಿ ಎಂಎಸ್ ಮಾಡುತ್ತಿದ್ದ ತೇಜಸ್ ಗೌಡ ಸ್ನೇಹಿತನ ಮದುವೆಗಾಗಿ ಊರಿಗೆ ಬಂದಿದ್ದ. ರಸ್ತೆಯಲ್ಲಿ ಕಟ್ಟಿದ್ದ ಫ್ಲೆಕ್ಸ್​ ಬಿದ್ದು ತೇಜಸ್ ಗಂಭೀರವಾಗಿ ಗಾಯಗೊಂಡಿದ್ದ, 3 ದಿನಗಳ ಕಾಲ ಸಾವು ಬದುಕಿನ ನಡುವೆ ಯುವಕ ಜೀವನ್ಮರಣ ಹೋರಾಟ ನಡೆಸಿದ್ದು, ಈಗ ಚಿಕಿತ್ಸೆ ಫಲಕಾರಿಯಾಗದೇ ತೇಜಸ್ ಗೌಡ ಸಾವನ್ನಪ್ಪಿದ್ದಾನೆ.

ಬೈಕ್​ಗೆ ಫ್ಲೆಕ್ಸ್ ಟೆಚ್ ಆಗುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೆಲಮಂಗಲ ನಗರಸಭೆಯ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾಗಿದ್ದು, ಜನರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ಪರಪ್ಪನ ಅಗ್ರಹಾರ ವಿಡಿಯೋ ವೈರಲ್ ಕೇಸ್ – ನಟ ಧನ್ವೀರ್ ವಿಚಾರಣೆಗೆ ಹಾಜರು!

Btv Kannada
Author: Btv Kannada

Read More