ಬೆಂಗಳೂರಲ್ಲಿ ಹಾಡಹಗಲೇ 7.11 ಕೋಟಿ ದರೋಡೆ ಕೇಸ್ – ಪೊಲೀಸರ ತನಿಖೆಯಲ್ಲಿ ರೋಚಕ ಅಂಶಗಳು ಬಯಲು!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ನಡೆದ 7.11 ಕೋಟಿ ದರೋಡೆ ಪ್ರಕರಣಕ್ಕೆ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಸಿಗುತ್ತಿದ್ದು, ಇದೀಗ ಪೊಲೀಸರ ತನಿಖೆಯಲ್ಲಿ ಕಳ್ಳತನದ ರೋಚಕ ಅಂಶಗಳು ಪತ್ತೆಯಾಗಿದೆ. ಈ ದರೋಡೆಗೆ ಗೋವಿಂದಪುರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಮಾಸ್ಟರ್ ಮೈಂಡ್ ಅನ್ನೋದು ಬಯಲಾಗಿದ್ದು, ಈಗ ಯಾವ್ಯಾವ ಮಾರ್ಗದಲ್ಲಿ ಕಳ್ಳರು ಎಸ್ಕೇಪ್ ಆಗಿದ್ರು ಅನ್ನೋ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಲ್ಲಿ ದರೋಡೆ ಮಾಡಿದ ಗ್ಯಾಂಗ್ ಚಿತ್ತೂರು ಕಡೆ ಹೊರಟಿತ್ತು. ಭಟ್ರಳ್ಳಿ, ಕಾಟಂನಲ್ಲೂರ್ ಗೇಟ್​ನಿಂದ ರೈಟ್ ತೆಗೆದುಕೊಂಡು ಹಳ್ಳಿ ಕಡೆ ಪ್ರಯಾಣ ಬೆಳೆಸಿದ್ದು, ಹಳ್ಳಿ ರಸ್ತೆ ಮಾರ್ಗವಾಗಿ ಹೊಸಕೋಟೆ ಹೋಗದೇ ಕಾರು ಮತ್ತೆ ಹೈವೇಗೆ ಬಂದಿದೆ. ಖದೀಮರು ಟೋಲ್​ಗೆ ಹೋಗದೇ ಸರ್ವಿಸ್ ರಸ್ತೆಯಿಂದ ಚಿತ್ತೂರಿಗೆ ಹೋಗಿದ್ದರು. ಮುಳಬಾಗಿಲು ಟೋಲ್​​ನಲ್ಲೂ ಕಳ್ಳರ ಕಾರು‌ ಪಾಸ್ ಆಗಿರಲಿಲ್ಲ. ರಾಬರ್ಸ್ ಪಕ್ಕಾ ರೂಟ್ ಮ್ಯಾಪ್ ರೆಡಿ ಮಾಡಿಕೊಂಡಿದ್ದರು. ಚಿತ್ತೂರಿಗೆ ತೆರಳಿದ ಗ್ಯಾಂಗ್ ಅಲ್ಲಿ ಕಾರು ಬಿಟ್ಟು ಎಸ್ಕೇಪ್ ಆಗಿತ್ತು. ಸದ್ಯ ದಕ್ಷಿಣ ವಿಭಾಗದ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದು, ಆರೋಪಿಗಳಿಗಾಗಿ ಚಿತ್ತೂರು ಮತ್ತು ತಿರುಪತಿಯಲ್ಲಿ ಖಾಕಿ ಹುಡುಕಾಟ‌ ನಡೆಸಿದೆ. ಕಾರು ಸಂಬಂಧ ಬೆಂಗಳೂರಲ್ಲಿ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ರಾಬರಿ ಕಿಂಗ್​ಪಿನ್ ಅಣ್ಣಪ್ಪ ನಾಯ್ಕ್​ಗೆ ವಿಚಾರಣೆ ಬಿಸಿ : 7.11 ಕೋಟಿ ರಾಬರಿಯ ಕಿಂಗ್​ಪಿನ್ ಅಣ್ಣಪ್ಪ ನಾಯ್ಕ್​ಗೆ ವಿಚಾರಣೆ ಬಿಸಿ ತಟ್ಟಿದೆ. ಗೋವಿಂದಪುರ ಠಾಣೆಯ ಕಾನ್ಸ್ ಟೇಬಲ್ ಆಗಿರುವ ಅಣ್ಣಪ್ಪ ನಾಯ್ಕ್​ನ ಕುಂಬಳಗೋಡಿನಲ್ಲಿರುವ ಮನೆಯಲ್ಲಿ ಖಾಕಿ ಸರ್ಚಿಂಗ್ ನಡೆಸುತ್ತಿದೆ. ಅಣ್ಣಪ್ಪ ನಾಯ್ಕ್ ಮನೆಯಲ್ಲಿ 7.11 ಕೋಟಿ ದರೋಡೆಯ ಬ್ಲೂ ಪ್ರಿಂಟ್ ರೆಡಿಯಾಗಿದ್ದು, ಪ್ರತಿದಿನ ಮನೆಯಲ್ಲೇ 7- 8 ಜನರನ್ನು ಕರೆಸಿ ಪೇದೆ ಮೀಟಿಂಗ್ ಮಾಡ್ತಿದ್ದ. ರಾಬರಿ ಮಾಡುವ 15 ದಿನ ಮುಂಚೆ ಅಣ್ಣಪ್ಪ ನಾಯ್ಕ್ ಹಲವು ಬಾರಿ ಸಭೆ ನಡೆಸಿದ್ದ. ಅಣ್ಣಪ್ಪ ನಾಯ್ಕ್ ಬಾರ್​​, ವೈನ್​ ಶಾಪ್​, ಹೋಟೆಲ್​ನಲ್ಲೂ ಚರ್ಚೆ ಮಾಡಿದ್ದ. ಅಣ್ಣಪ್ಪ ನಾಯ್ಕ್ ಅವರ ಪತ್ನಿ, ಮಕ್ಕಳ ಬಳಿ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.

ಮತ್ತೊಬ್ಬ ಆರೋಪಿ ಅರೆಸ್ಟ್ : ಇದುವರೆಗೂ ದರೋಡೆ ಪ್ರಕರಣ ಸಂಬಂಧ 8 ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದೆ. ಸಿಎಂಎಸ್ ಕಂಪನಿಯ 4 ಜನ ಸಿಬ್ಬಂದಿ, ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್​, ಸಿಎಂಎಸ್ ಕಂಪನಿಯ ಮಾಜಿ ಸಿಬ್ಬಂದಿ ಝೆವಿಯರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಲ್ಯಾಣ ನಗರದ ಇಬ್ಬರು ಸೇರಿ ಒಟ್ಟು 8 ಜನರ ವಿಚಾರಣೆ ನಡೆಸುತ್ತಿದ್ದು, ಸದ್ಯಕ್ಕೆ ಬೆಂಗಳೂರು ಪೊಲೀಸರು ಚೆನ್ನೈನಲ್ಲಿ 7 ಕೋಟಿ ಹಣ ರಿಕವರಿ ಮಾಡಿದ್ದು, ಚೆನ್ನೈನಲ್ಲಿ ಮತ್ತೊಬ್ಬ ಆರೋಪಿ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ.

ಇದನ್ನೂ ಓದಿ : ಡಿಕೆಶಿ ಸಿಎಂ ಆಗಬೇಕೆಂದು ಕೇಳೋದ್ರಲ್ಲಿ ತಪ್ಪೇನಿದೆ? – ಡಿಸಿಎಂ ಪರ MLA ರಮೇಶ್ ಬಾಬು ಬ್ಯಾಟಿಂಗ್!

Btv Kannada
Author: Btv Kannada

Read More