ಲಂಚಕ್ಕೆ ಡಿಮ್ಯಾಂಡ್ – ರೆಡ್ ಹ್ಯಾಂಡ್ ಆಗಿ ‘ಲೋಕ’ ಬಲೆಗೆ ಬಿದ್ದ ಬೆಂಗಳೂರು ಜಲಮಂಡಳಿ ಮೀಟರ್ ರೀಡರ್!

ಬೆಂಗಳೂರು : ಬೆಂಗಳೂರು ನಗರದ ಜಲಮಂಡಳಿ (BWSSB) ಯ ಮೀಟರ್ ರೀಡರ್ ನರಸಿಂಹಪ್ಪ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೆಂಗಳೂರು ದಕ್ಷಿಣ, ಬಿಟಿಎಂ ಲೇಔಟ್ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೀಟರ್ ರೀಡರ್ ನರಸಿಂಹಪ್ಪ ಎಂಬಾತ, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಗೆ ಧಮ್ಕಿ ಹಾಕಿ, ಮಾಮೂಲು ಪಡೆಯುತ್ತಿದ್ದರು ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.

ಕೇರಳ ಮೂಲದ ಪಿಜಿ ಮಾಲೀಕ ಡಿಟೋ ಅವರಿಗೆ ಕಳೆದ ಕೆಲ ತಿಂಗಳಿನಿಂದ ನರಸಿಂಹಪ್ಪ ಟಾರ್ಚರ್ ನೀಡುತ್ತಿದ್ದ. ಪ್ರತಿ ತಿಂಗಳು ₹2,000 ಮಾಮೂಲಿ ಹಣ ಪಡೆಯುತ್ತಿದ್ದರೂ, ಇತ್ತೀಚೆಗೆ ₹20,000 ಲಂಚ ಕೊಡುವಂತೆ ಇಲ್ಲವಾದಲ್ಲಿ ‘ಮೀಟರ್ ಕಿತ್ತಾಕುತ್ತೇನೆ’ ಎಂದು ಧಮ್ಕಿ ಹಾಕಿದ್ದ. ಮಡಿವಾಳದ ಮಾರುತಿನಗರದ ಪಿಜಿ ಮಾಲೀಕ ಡಿಟೋ ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಈ ಕಾರ್ಯಾಚರಣೆ ನಡೆಸಿ, ಇಂದು ₹10,000 ಲಂಚ ಪಡೆಯುತ್ತಿದ್ದ ವೇಳೆ ನರಸಿಂಹಪ್ಪ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ನರಸಿಂಹಪ್ಪ ಮೀಟರ್ ರೀಡಿಂಗ್‌ನಲ್ಲಿ ಹೆಚ್ಚು ಬಿಲ್ ಬರುವಂತೆ ಮಾಡಿ, ನಂತರ ಜನರಿಗೆ ಬೆದರಿಕೆ ಹಾಕುತ್ತಿದ್ದರು. ‘ತಿಂಗಳ ಮಾಮೂಲು’ ಸಿಗದಿದ್ದರೆ ಮೀಟರ್ ಕಿತ್ತಾಕುವುದಾಗಿ ಆವಾಜ್ ಹಾಕುತ್ತಿದ್ದರು. ಆರೋಪಿಯು ಅನೇಕರಿಂದ ಫೋನ್ ಪೇ ಮೂಲಕವೂ ಲಂಚದ ಹಣವನ್ನು ಪಡೆಯುತ್ತಿದ್ದರು ಎಂಬ ಮಾಹಿತಿ ಬಯಲಾಗಿದೆ. ಬಂಧಿತ ನರಸಿಂಹಪ್ಪನನ್ನು ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಮನೆ ಮುಂದೆ ನಿಲ್ಲಿಸಿದ್ದ 2 ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು – ಕಿಡಿಗೇಡಿಗಳನ್ನು ಬಂಧಿಸುವಂತೆ ಗ್ರಾಮಸ್ಥರ ಆಗ್ರಹ!

Btv Kannada
Author: Btv Kannada

Read More