ಕಾಂಗ್ರೆಸ್ ಕೇವಲ ಜಾಹೀರಾತುಗಳಿಗೆ ಸೀಮಿತವಾಗಿರುವ ಸರ್ಕಾರ – ನಿಖಿಲ್ ಕುಮಾರಸ್ವಾಮಿ ಆಕ್ರೋಶ!

ಬೆಂಗಳೂರು : JDS ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.‌ ಕಾಂಗ್ರೆಸ್ ಕೇವಲ ಜಾಹೀರಾತುಗಳಿಗೆ ಸೀಮಿತವಾಗಿರುವ ಸರ್ಕಾರ. ರಾಜ್ಯದ ಜನರ ತೆರಿಗೆ ಉಪಯೋಗ ಮಾಡಿಕೊಳ್ತಿದ್ದಾರೆ, ವೈಫಲ್ಯಗಳು ಭ್ರಷ್ಟಾಚಾರಕ್ಕೆ ಉತ್ತರ ಕೊಡಬೇಕು. ಏಳುವರೆ ಕೋಟಿ ಜನರ ಮನಸ್ಸು ಗೆಲ್ಲುವ ಕೆಲಸ ಮಾಡಿದ್ದಾರಾ? ಜಾಹೀರಾತು ಕೊಡೋದ್ರಿಂದ ಅವರಿಗೆ ಸಮಾಧಾನ ಆಗಬಹುದು ಅಷ್ಟೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದೇ ವೇಳೆ ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಯಾವ ಮಟ್ಟಕ್ಕೆ ಹೋಗಿದೆ ಅಂತಾ ಜನರಿಗೆ ಆತಂಕ ಶುರುವಾಗಿದೆ. ಗೃಹ ಸಚಿವರು ಅನುಭವಿಗಳಿದ್ದಾರೆ, ಯಾವಾಗ ಎಡವಟ್ಟು ಆದ್ರು ಗೊತ್ತಿಲ್ಲಾ ಅಂತಾರೆ. ಗೊತ್ತಿಲ್ಲದೆ ಇರುವ ಸರ್ಕಾರ ಆಗಿದೆ, ಗೊತ್ತಿಲ್ಲಾ ಎಂದು ಹೇಳುವ ಸಚಿವರು ಏನ್ ಉತ್ತರ ಕೊಡ್ತಾರೆ ನೋಡೋಣ. ಕಾನೂನು ಸುವ್ಯವಸ್ಥೆ ದರೋಡೆ ಮಾಡೋರಿಗೆ ಪಾಠ ಕಲಿಸಲ್ಲ, ಗೃಹ ಸಚಿವರು ವಿಚಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಇನ್ನು, ಬಿಹಾರದಲ್ಲಿ ನಿತೀಶ್ ಕುಮಾರ್ ಗೆಲುವು ಕಾಂಗ್ರೆಸ್ ಪತನದ ಸಂದೇಶ ಕೊಟ್ಟಿದೆ, ಬಿಹಾರದ ಚುನಾವಣಾ ಸೋಲಿನ ಫಲಿತಾಂಶ ಕಾಂಗ್ರೆಸ್ ನಾಯಕರಿಗೆ ನಿದ್ದೆಗಡೆಸಿದೆ. 2018ರ ಚುನಾವಣೆ ಎಲ್ಲಿಗೆ ಹೋಗಿ ನಿಲ್ಲಿಸುತ್ತೆ ಅಂತಾ ಆತಂಕ ಶುರುವಾಗಿದೆ. ಜೆಡಿಎಸ್ 17 ಸದಸ್ಯರು ಇದ್ದಾರೆ ಸಿಂಗಲ್ ಡಿಜಿಟ್​ಗೆ ಬರುತ್ತೆ ಅಂತಿದ್ರು. ನ್ಯಾಷನಲ್ ಪಾರ್ಟಿ ಅಂತ ಬೋರ್ಡ್ ಇದೆ ಚೇಂಜ್ ಮಾಡೋದು ಒಳ್ಳೆಯದು, ಕಾಂಗ್ರೆಸ್ ನಾಯಕರು ಬೇರೆ ಪಕ್ಷವನ್ನು ಅವಹೇಳನ ಮಾಡೋದನ್ನ ಬಿಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಇದನ್ನೂ ಓದಿ : ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಒಂದು ವಾರ ತಡವಾಗಿ ತೆರೆಗೆ – ನ.27ಕ್ಕೆ ಚಿತ್ರ ರಿಲೀಸ್!

Btv Kannada
Author: Btv Kannada

Read More