ಅಧಿಕಾರ ಹಸ್ತಾಂತರ ಬಗ್ಗೆ ಹೈಕಮಾಂಡ್‌ ಏನೂ ಹೇಳಿಲ್ಲ – ಗೃಹ ಸಚಿವ ಡಾ.ಜಿ ಪರಮೇಶ್ವರ್!

ಬೆಂಗಳೂರು : ಸಿದ್ದರಾಮಯ್ಯ ಸರ್ಕಾರಕ್ಕೆ ಇಂದು 2.5 ವರ್ಷದ ಸಂಭ್ರಮ. ಸಿಎಂ ಕುರ್ಚಿ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿ, ಎರಡೂವರೆ ವರ್ಷ ಆಯ್ತು ಅಂತ ಮಹತ್ವ ಕೊಡೋ ಅಗತ್ಯ ಇಲ್ಲ. ಹೈಕಮಾಂಡ್‌ನವ್ರು ಅಧಿಕಾರ ಹಸ್ತಾಂತರ ಬಗ್ಗೆ ಏನೂ ಹೇಳಿಲ್ಲ ಎಂದು ಹೇಳಿದರು.

ಈ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಡಾ.ಜಿ ಪರಮೇಶ್ವರ್ ಮಾತನಾಡಿ, ಏನೇ ಮಹತ್ವ ಬರೋದು ಹೈಕಮಾಂಡ್ ಆ ವಿಚಾರ ಹೇಳಿದಾಗ ಮಾತ್ರ. ಇದೂವರೆಗೂ ಎಲ್ಲೂ ಹೈಕಮಾಂಡ್ ಆ ವಿಚಾರ ನಮಗೆ ಹೇಳಿಲ್ಲ, ಸಿಎಲ್‌ಪಿ ಸಭೆಯಲ್ಲೂ ಆ ವಿಚಾರ ಚರ್ಚೆಗೆ ಬಂದಿಲ್ಲ, ಹೈಕಮಾಂಡ್ ಹೇಳಿಲ್ಲ. ಹಾಗಾಗಿ ಅದಕ್ಕೆ ಮಹತ್ವ ಯಾಕೆ ಕೊಡಬೇಕು ಎಂದಿದ್ದಾರೆ.

ಸಂಪುಟ ಪುನಾರಚನೆ ಅಥವಾ ಬೇರೆ ಏನೇ ಇದ್ರೂ ಹೈಕಮಾಂಡ್ ತೀರ್ಮಾನಿಸುತ್ತೆ, ನಾವು ನಾವೇ ಏನೇನೋ ಹೇಳಿಕೊಂಡರೆ ಅದಕ್ಕೆ ಮಹತ್ವ ಕೂಡ ಇಲ್ಲ. ಸಿಎಂ ಬಹಳ ಅನುಭವಿಗಳು, ಹಣಕಾಸು ವಿಚಾರದಲ್ಲಿ ಅನುಭವ ಇರೋರು ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಇದನ್ನೂ ಓದಿ : ಶಿವಣ್ಣ- ಧನಂಜಯ್ ‘666 ಆಪರೇಷನ್ ಡ್ರೀಮ್ ಥಿಯೇಟರ್’​ನಲ್ಲಿ ಬಹುಭಾಷಾ ನಟಿ ಪ್ರಿಯಾಂಕಾ ಮೋಹನ್!

Btv Kannada
Author: Btv Kannada

Read More