ಕ್ಲೈಮ್ಯಾಕ್ಸ್ ಹಂತ ತಲುಪಿದ ಧರ್ಮಸ್ಥಳ ಷಡ್ಯಂತ್ರ ಕೇಸ್ – ಚಿನ್ನಯ್ಯ ಸೇರಿ 6 ಮಂದಿ ವಿರುದ್ಧ ಚಾರ್ಜ್​ಶೀಟ್ ರೆಡಿ!

ಮಂಗಳೂರು : ದೇಶ-ವಿದೇಶಗಳಲ್ಲಿ ಭಾರೀ ಸದ್ದು ಮಾಡಿದ್ದ ಧರ್ಮಸ್ಥಳ ಷಡ್ಯಂತ್ರ ಪ್ರಕರಣ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. SIT ತನಿಖೆಯಲ್ಲಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡಿರೋದು ದೃಢವಾಗಿದ್ದು, ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಅಪಪ್ರಚಾರ ಮಾಡಿದ ಬುರುಡೆ ಗ್ಯಾಂಗ್ ವಿರುದ್ಧ 4,000 ಪುಟಗಳ ಚಾರ್ಜ್ ಶೀಟ್ ರೆಡಿಯಾಗಿದೆ.

SIT ತನಿಖೆಯಲ್ಲಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡಲು ಷಡ್ಯಂತ್ರ ರೂಪಿಸಿರುವುದು ದೃಢಪಟ್ಟಿದೆ. ಮಹೇಶ್ ತಿಮರೋಡಿ, ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಸುಜಾತ ಭಟ್, ವಿಠಲ್ ಗೌಡ ಸೇರಿ 6 ಮಂದಿಯ ವಿರುದ್ಧ ಒಟ್ಟು 4 ಸಾವಿರ ಪುಟಗಳ ಚಾರ್ಜ್​ಶೀಟ್ ರೆಡಿಯಾಗಿದೆ. SIT ತಂಡವು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಈ ದೋಷಾರೋಪ ಪಟ್ಟಿಯನ್ನು ಸಲ್ಲಿಸುವ ಸಾಧ್ಯತೆ ಇದೆ.

ಪೊಲೀಸರ ಚಾರ್ಜ್ ಶೀಟ್‌ನಲ್ಲಿ ಮುಖ್ಯ ಆರೋಪಿ ಚಿನ್ನಯ್ಯನೇ ನಕಲಿ ತಲೆ ಬುರುಡೆಯನ್ನು ತಂದಿರೋದು ಕನ್ಫರ್ಮ್ ಆಗಿದೆ. ತಲೆ ಬುರುಡೆ ತಂದುಕೊಟ್ಟವರ ಬಗ್ಗೆಯೂ ಸಂಪೂರ್ಣ ವಿವರವನ್ನು SIT ಉಲ್ಲೇಖಿಸಿದೆ. ಈ ಷಡ್ಯಂತ್ರದ ಗ್ಯಾಂಗ್ ನಕಲಿ ಬುರುಡೆಯನ್ನು ಎಲ್ಲೆಲ್ಲಿಗೆ ತೆಗೆದುಕೊಂಡು ಹೋಗಿದ್ದರು ಮತ್ತು ಅದನ್ನು ಇಟ್ಟುಕೊಂಡು ಏನೇನು ಷಡ್ಯಂತ್ರ ಮಾಡಿದ್ದಾರೆ ಎಂಬ ಎಲ್ಲಾ ಅಂಶಗಳನ್ನು ಚಾರ್ಜ್ ಶೀಟ್ ಒಳಗೊಂಡಿದೆ.

ಪುಣ್ಯಕ್ಷೇತ್ರ ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ಪ್ರೇರಣೆ ಕೊಟ್ಟಿದ್ದು ಯಾರು ? ನಕಲಿ ಬುರುಡೆ ತಂದುಕೊಟ್ಟಿದ್ದು ಯಾರು ?, ಎಲ್ಲಿಂದ ಬುರುಡೆ ತಂದಿದ್ದರು ? ಬುರುಡೆ ವಿಚಾರದಲ್ಲಿ ಏನೇನು ಷಡ್ಯಂತ್ರ ನಡೆದಿದೆ ಎಂಬ ಬಗ್ಗೆ ಚಾರ್ಜ್ ಶೀಟ್​ನಲ್ಲಿ ಮಾಹಿತಿ ಇದೆ. ಈ ಷಡ್ಯಂತ್ರದ ಗ್ಯಾಂಗ್ ತಲೆ ಬುರುಡೆ ಎಲ್ಲೆಲ್ಲಿಗೆ ತೆಗೆದುಕೊಂಡು ಹೋಗಿದ್ದರು ? ಬುರುಡೆ ಇಟ್ಕೊಂಡು ಏನೇನು ಷಡ್ಯಂತ್ರ ಮಾಡಿದ್ದಾರೆ ಎನ್ನುವ ಎಲ್ಲಾ ಅಂಶ ಉಲ್ಲೇಖವಾಗಿದೆ.

SIT ಮುಖ್ಯ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರ ನೇತೃತ್ವದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ. ಈಗಾಗಲೇ ಮುಖ್ಯ ಆರೋಪಿ ಚಿನ್ನಯ್ಯನನ್ನು ಬಂಧಿಸಲಾಗಿದ್ದು, ಉಳಿದವರ ವಿಚಾರಣೆ ನಡೆಯುತ್ತಿದೆ. ಚಾರ್ಜ್ ಶೀಟ್ ಸಲ್ಲಿಕೆ ಬೆನ್ನಲ್ಲೇ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಉಳಿದ ಆರೋಪಿಗಳನ್ನು ಬಂಧಿಸುವ ಭೀತಿ ಎದುರಾಗಿದೆ. ಯಾವುದೇ ಕ್ಷಣದಲ್ಲಿ ತಿಮರೋಡಿ, ಮಟ್ಟಣ್ಣನವರ್ ಸೇರಿ ಆರೋಪಿಗಳು ಅರೆಸ್ಟ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ : 7 ಕೋಟಿ ರಾಬರಿ ಕೇಸ್ – ದರೋಡೆಯಾದ ವಾಹನ ಪರಿಶೀಲನೆ.. CMS ವಾಹನ ಚಾಲಕ ಪೋಲೀಸರ ವಶಕ್ಕೆ!

Btv Kannada
Author: Btv Kannada

Read More