ಬೆಂಗಳೂರು : ಗಂಡನೊಂದಿಗೆ ಪದೇ ಪದೇ ಜಗಳವಾಡಿ ತವರು ಮನೆಗೆ ಬರುತ್ತಿದ್ದ ಮಗಳ ಮೇಲೆ ತಾಯಿಯೇ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಅಗ್ರಹಾರ ಲೇಔಟ್‌ನ ಹರಿಹರೇಶ್ವರ ದೇವಸ್ಥಾನದ ಬಳಿ. 22 ವರ್ಷದ ರಮ್ಯಾ, ರಮ್ಯಾ ತಾಯಿ ಸರೋಜಮ್ಮ.
ಪದೇ ಪದೇ ಗಂಡನ ಜೊತೆ ಜಗಳ ಮಾಡಿಕೊಂಡು ತವರು ಮನೆಗೆ ಬಂದು ನೆಲೆಸುತ್ತಿದ್ದ ರಮ್ಯಾಳ ವರ್ತನೆಯಿಂದ ತಾಯಿ ಸರೋಜಮ್ಮ ತೀವ್ರ ಬೇಸರಗೊಂಡಿದ್ದರು. ನಿನ್ನೆ ಕೂಡ ರಮ್ಯಾ ಗಂಡನ ಜೊತೆ ಜಗಳವಾಡಿ ಮನೆಗೆ ಬಂದಿದ್ದಳು. ಬೆಳಗ್ಗೆ ಇದೇ ವಿಚಾರವಾಗಿ ತಾಯಿ ಮತ್ತು ಮಗಳ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಈ ವೇಳೆ ಕೋಪಗೊಂಡ ತಾಯಿ ಸರೋಜಮ್ಮ, ಮಚ್ಚಿನಿಂದ ಮಗಳು ರಮ್ಯಾಳ ಕುತ್ತಿಗೆಗೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ.
ಗಾಯಾಳು ರಮ್ಯಾ ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತೀವ್ರ ಹಲ್ಲೆಗೊಳಗಾಗಿದ್ದಾರೆ. ಆರೋಪಿ ತಾಯಿ ಸರೋಜಮ್ಮ ಹಲ್ಲೆ ನಡೆಸಿದ ನಂತರ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಾಪತ್ತೆಯಾಗಿರುವ ಆರೋಪಿ ಸರೋಜಮ್ಮಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಅಫ್ಜಲ್ ನಿರ್ದೇಶನದ “ನೆನಪುಗಳ ಮಾತು ಮಧುರ” ರಿಲೀಸ್ಗೆ ರೆಡಿ – ನಿರ್ಮಾಪಕರ ಬರ್ತ್ಡೇ ದಿನವೇ ಚಿತ್ರದ ಟ್ರೇಲರ್ ಅನಾವರಣ!







