ಬೆಂಗಳೂರು : ಬಾಕಿ ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿಮಾಲ್ಗೆ ಮತ್ತೆ ಬೀಗ ಬಿದ್ದಿದೆ. ಈ ಹಿಂದೆಯೂ ಕೋಟ್ಯಂತರ ತೆರಿಗೆ ಪಾವತಿಸದ ಸಲುವಾಗಿ ಹಲವು ಬಾರಿ ಮಾಲ್ ಅನ್ನು ಸೀಜ್ ಮಾಡಲಾಗಿತ್ತು. ಈ ಬಾರಿಯೂ ಬರೋಬ್ಬರಿ 30,81,45,600 ರೂ. ತೆರಿಗೆ ಬಾಕಿ ಉಳಿಸಿಕೊಂಡ ಕಾರಣ ಅಧಿಕಾರಿಗಳು ಇಂದು ಬೆಳಗ್ಗೆ ಮಾಲ್ ಅನ್ನು ಸೀಜ್ ಮಾಡಿ ನೋಟಿಸ್ ಕಳುಹಿಸಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್ ಅಭಿಷೇಕ್ ಡೆವೆಲಪರ್ಸ್ ಅವರ ಒಡೆತನದ್ದಾಗಿದ್ದು, ಮಾಲ್ ಮಾಲೀಕರಿ ಜಿಬಿಎಗೆ ಕಟ್ಟಬೇಕಾಗಿರುವ ತೆರಿಗೆಯನ್ನ ಸರಿಯಾಗಿ ಪಾವತಿ ಮಾಡಿಲ್ಲ. ಈ ಕಾರಣಕ್ಕೆ ಮಂತ್ರಿ ಮಾಲ್ಗೆ ಬೀಗ ಹಾಗಿ ಸೀಜ್ ಮಾಡಲಾಗಿದೆ.

ಮಂತ್ರಿ ಮಾಲ್ಗೆ ಹಲವು ಬಾರಿ ಬಿದ್ದಿದೆ ಬೀಗ :
ಈ ಹಿಂದೆ ಕೂಡ ಮಂತ್ರಿಮಾಲ್ಗೆ ಹಲವು ಬಾರಿ ಬೀಗ ಬಿದ್ದಿತ್ತು. 2020ರಲ್ಲಿ ಬರೋಬ್ಬರಿ 42,63,40,874 ರೂ ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಬೌನ್ಸ್ ಆಗಿದ್ದಕ್ಕೆ ಮಂತ್ರಿ ಮಾಲ್ಗೆ ಬೀಗ ಹಾಕಲಾಗಿತ್ತು. ಮತ್ತೆ ಮತ್ತೆ ನೋಟಿಸ್ ನೀಡಿದ್ದರೂ ಮಾಲ್ ಆಡಳಿತವು ತೆರಿಗೆ ಪಾವತಿಸಲು ಕ್ರಮ ಕೈಗೊಂಡಿರಲಿಲ್ಲ. ಬಳಿಕ 2021 ರಲ್ಲಿ 20,33,34,828 ರೂ ಆಸ್ತಿ ತೆರಿಗೆ ಬಾಕಿ ಇದ್ದ ಕಾರಣ ಆಸ್ತಿ ಮುಟ್ಟುಗೋಲು ಎಚ್ಚರಿಕೆ ಸಹ ನೀಡಿತ್ತು.
ಇದನ್ನೂ ಓದಿ : ಸೆಟ್ಟೇರಿತು ಧ್ರುವ ಸರ್ಜಾ 7ನೇ ಸಿನಿಮಾ – ‘ಕ್ರಿಮಿನಲ್’ನಲ್ಲಿ ಆಕ್ಷನ್ ಪ್ರಿನ್ಸ್ಗೆ ರಚಿತಾ ರಾಮ್ ಜೋಡಿ!
Author: Btv Kannada
Post Views: 225







