ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಚಿತ್ರಕಲಾ ಎಂಬ ಮಹಿಳೆಯ ಮೇಲೆ ಆರೋಪಿಗಳು ಹಲ್ಲೆಗೈದಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಘಟನೆಯ ಸಂಪೂರ್ಣ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿತ್ರಕಲಾ ಮನೆ ಪಕ್ಕ ಪವನ್ ಕುಮಾರ್ ಎಂಬಾತ ಬಿಲ್ಡಿಂಗ್ ಕಟ್ಟಿಸುತ್ತಿದ್ದ. ಚಿತ್ರಕಲಾ ಮನೆಯ ಗೋಡೆಗೆ ಡ್ರಿಲ್ ಬಿಟ್ ಹಾಗೂ ಮೆಸ್ ಹಾಕುತ್ತಿದ್ರು, ಈ ವೇಳೆ ನಮ್ಮ ಗೋಡೆಗೆ ಯಾಕೆ ಹಾಕ್ತಿದ್ದೀರಾ ಅಂಥ ಚಿತ್ರಕಲಾ ಪ್ರಶ್ನಿಸಿದ್ದಾರೆ. ಚಿತ್ರಕಲಾ ಪ್ರಶ್ನಿಸಿದ್ದಕ್ಕೆ ಪವನ್ ಆಕೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ.

ಮನೆ ಮುಂದೆ ನಿಂತಿದ್ದ ಚಿತ್ರಕಲಾ ಎಳೆದಾಡಿ ಕೂದಲು ಹಿಡಿದು ದೌರ್ಜನ್ಯ ಎಸಗಿದ್ದಾನೆ. ಪವನ್ ಕುಮಾರ್, ತಾಯಿ ಪದ್ಮಾವತಿ, ಪತ್ನಿ ಭಾಗ್ಯ, ತಂದೆ ಚಿತ್ರಕಲಾ ಮೇಲೆ ಹಲ್ಲೆ ಮಾಡಿರುವ ಆರೋಪವಿದೆ. ಅಷ್ಟೇ ಅಲ್ಲದೆ ಚಿತ್ರಕಲಾಗೆ ಆ್ಯಸಿಡ್ ಹಾಕೋದಾಗಿ ಆರೋಪಿಗಳು ಬೆದರಿಕೆ ಹಾಕಿದ್ದು, ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ FIR ದಾಖಲಾಗಿದೆ.


ಇದನ್ನೂ ಓದಿ : ಸರ್ಕಾರದ ಗೋಮಾಳ ಜಾಗದಲ್ಲಿ ಅಕ್ರಮ ಬಾರ್ & ರೆಸ್ಟೋರೆಂಟ್ – ರಾಜಾರೋಷವಾಗಿ ನಡೆಯುತ್ತಿದೆ ‘ಹೌಸ್ ಆಫ್ ಲಿಕ್ಕರ್ಸ್’ ವಹಿವಾಟು!







