ಸರ್ಕಾರದ ಗೋಮಾಳ ಜಾಗದಲ್ಲಿ ಅಕ್ರಮ ಬಾರ್ & ರೆಸ್ಟೋರೆಂಟ್ – ರಾಜಾರೋಷವಾಗಿ ನಡೆಯುತ್ತಿದೆ ‘ಹೌಸ್ ಆಫ್ ಲಿಕ್ಕರ್ಸ್’ ವಹಿವಾಟು!

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಸುಮಾರು 1 ವರ್ಷದಿಂದಲೂ ಸರ್ಕಾರಿ ಗೋಮಾಳ ಜಾಗದಲ್ಲಿ ಅಕ್ರಮವಾಗಿ ಬಾರ್ & ರೆಸ್ಟೋರೆಂಟ್ ವ್ಯವಹಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

‘ಹೌಸ್ ಆಫ್ ಲಿಕ್ಕರ್ಸ್’ ಹೆಸರಿನಲ್ಲಿ ಸಿಎಲ್-7 ಲೈಸೆನ್ಸ್ ಪಡೆದಿರುವ ಈ ಪಬ್ & ಬಾರ್, ರಾಜಣ್ಣ, ಅಮೀತ್ ಮತ್ತು ಶರತ್ ಎಂಬುವವರ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ದೇವನಹಳ್ಳಿ ತಾಲೂಕಿನ ಕೊಂಡೇನಹಳ್ಳಿ ಗೇಟ್ ಬಳಿ ನಿರ್ಮಾಣವಾಗಿರುವ ಈ ಅಕ್ರಮ ಕಟ್ಟಡವು ಕೊಟ್ನಾ ತೆವರು ಸರ್ವೇ ನಂ-28 ರ ಸರ್ಕಾರಿ ಗೋಮಾಳಕ್ಕೆ ಸೇರಿದ ಜಾಗದಲ್ಲಿದೆ. ಅಷ್ಟೇ ಅಲ್ಲದೆ ವಸತಿ ಉದ್ದೇಶಕ್ಕಾಗಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ವರ್ಗದವರಿಗೆ 94ಸಿಸಿ ನಿಯಮದಡಿ ಒಂದು ವರ್ಷದ ಹಿಂದೆ ಮಂಜೂರು ಮಾಡಲಾಗಿದ್ದ ನಿವೇಶನವನ್ನೂ ಸಹ ದುರ್ಬಳಕೆ ಮಾಡಿಕೊಳ್ಳಲಾಗಿದೆ.

ಇನ್ನು ನರಸಿಂಹಯ್ಯ ಎಂಬುವವರಿಗೆ ವಸತಿ ಉದ್ದೇಶಕ್ಕಾಗಿ ಸರ್ಕಾರದಿಂದ ಮಂಜೂರಾಗಿದ್ದ ಸೈಟ್ ಅನ್ನು ಕೂಡ ಬಾರ್ ಮತ್ತು ರೆಸ್ಟೋರೆಂಟ್‌ ನಿರ್ಮಾಣಕ್ಕೆ ಬಳಸಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳ ನೋಟಿಸ್ ನೀಡಿದರೂ ಬಾರ್ ಮಾಲೀಕರು ಕೇರ್ ಮಾಡಿಲ್ಲ. ‘ಹೌಸ್ ಆಫ್ ಲಿಕ್ಕರ್ಸ್’ ಹೆಸರಲ್ಲಿ ಪ್ರಭಾವಿಗಳು ರಾಜಾರೋಷವಾಗಿ ವ್ಯವಹಾರ ಮಾಡ್ತಿದ್ದಾರೆ.

‘ಹೌಸ್ ಆಫ್ ಲಿಕ್ಕರ್ಸ್’ ಹೆಸರಿನಲ್ಲಿ ಎಣ್ಣೆ ಅಂಗಡಿ ಮಾಡಿದ್ರೂ ಅಧಿಕಾರಿಗಳು ​ಕೇರ್ ಮಾಡಿಲ್ಲ. ಈ ಅಕ್ರಮ ವಹಿವಾಟಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಗಂಭೀರ ಆರೋಪ ಕೇಳಿಬಂದಿದ್ದು, ಸ್ಥಳೀಯರು ಈ ಅಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ.. ನೆಲಕ್ಕೆ ಬಿದ್ದು ನವಜಾತ ಶಿಶು ಸಾವು – ಪೋಷಕರ ಆಕ್ರೋಶ!

Btv Kannada
Author: Btv Kannada

Read More