ಡಾ. ಲೀಲಾ ಮೋಹನ್ ಪಿ.ವಿ.ಆರ್ ನಟಿಸಿರುವ ‘ನಾಯಿ ಇದೆ ಎಚ್ಚರಿಕೆ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ವಿಭಿನ್ನ ಶೀರ್ಷಿಕೆಯ ಮೂಲಕವೇ ಗಮನ ಸೆಳೆದಿರುವ ಈ ಸಿನಿಮಾ ನ.28ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ.

ಕಲಿ ಗೌಡ ನಿರ್ದೇಶನದ ‘ನಾಯಿ ಇದೆ ಎಚ್ಚರಿಕೆ’ ಚಿತ್ರ ವಿಚಿತ್ರ ಘಟನೆಗಳ ಸುತ್ತ ಕಥೆ ಸಾಗುತ್ತದೆ. ಈ ಸಿನಿಮಾದ ಟ್ರೇಲರ್ ನೋಡಿ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ವೃತ್ತಿಯಲ್ಲಿ ವೈದ್ಯನಾಗಿ, ಸಿನಿಮಾ ವ್ಯಾಮೋಹ ಅಂಟಿಸಿಕೊಂಡ ಡಾ.ಲೀಲಾ ಮೋಹನ್ ಪಿ.ವಿ.ಆರ್ ಅವರೀಗ ‘ನಾಯಿ ಇದೆ ಎಚ್ಚರಿಕೆ’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ಡಾ. ಲೀಲಾ ಮೋಹನ್ ಪಿವಿಆರ್ ಅವರು ವೃತ್ತಿಯಲ್ಲಿ ವೈದ್ಯರಾದರೂ, ಪ್ರವೃತ್ತಿಯಲ್ಲಿ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವುಗಳಲ್ಲಿ ನಟನೆ ಕೂಡ ಒಂದು. ಎಂಬಿಬಿಎಸ್, ಎಂಡಿ ಪದವಿಗಳನ್ನು ಪೂರೈಸಿ ಕಳೆದ 18 ವರ್ಷಗಳಿಂದ ಬೆಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು, ಈಗಾಗಲೇ ಕನ್ನಡದ ಗಡಿಯಾರ, ಉಗ್ರಾವತಾರ, ರೇ1, ಪುಟಾಣಿ ಪಂಟ್ರು, ರಾಕ್ಷಸ, ಬಾರ್ಬಿ, ದ ಎಂಡ್ ಜೊತೆಗೆ ತೆಲುಗಿನಲ್ಲಿ ಕಲ್ಯಾಣ ಮಸ್ತು, ಕಾಲಾನಿಕಿ ಭೈರವುಡು ಸೇರಿ ಹಲವು ಸಿನಿಮಾಳಲ್ಲಿ ಬಣ್ಣ ಹಚ್ಚಿದ್ದಾರೆ.

ಈ ಹಾರರ್ ಥಿಲ್ಲರ್ ಸಿನಿಮಾದಲ್ಲಿ ಲೀಲಾ ಮೋಹನ್ ಜೊತೆ ಪ್ರಮೋದ್ ಶೆಟ್ಟಿ, ಮಂಗಳೂರು ದಿನೇಶ್, ಪ್ರಬೀಕ್ ಮೊಗವೀರ್, ಬಲರಾಜವಾಡಿ, ದಿವ್ಯಾ, ಮಾನಸ, ಚಂದನಾ ಪ್ರಮುಖ ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ : ಸಂಪುಟ ಪುನಾರಚನೆಗೆ ‘ಹೈ’ ಬ್ರೇಕ್ – ಯಾವುದೇ ಬದಲಾವಣೆ ಬೇಡ ಎಂದು ಸಿಎಂಗೆ ಹೈಕಮಾಂಡ್ ಸೂಚನೆ!







