ಮೈಸೂರು : ಕಾಂಗ್ರೆಸ್ ಶಾಸಕ ಡಿ.ರವಿಶಂಕರ್ ತನ್ನದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಮೈಸೂರಿನ ಕೆ.ಆರ್.ನಗರದ ದೊಡ್ಡೇಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ವೇಳೆ ವೇದಿಕೆಯಲ್ಲೇ ಕಾಂಗ್ರೆಸ್ ಕಾರ್ಯಕರ್ತ ಮಹದೇವು ಎಂಬುವವರಿಗೆ MLA ಡಿ.ರವಿಶಂಕರ್ ಕಪಾಳಕ್ಕೆ ಹೊಡೆದಿದ್ದಾರೆ. ಶಾಸಕ ಡಿ.ರವಿಶಂಕರ್ ಬಳಿ ಡೈರಿ ಕಟ್ಟಡ ಕಟ್ಟಿಸಿಕೊಡಿ ಎಂದಾಗ ಸುಮ್ಮನೆ ಇರು ಎಂದು ಹಲ್ಲೆಗೈದಿದ್ದಾರೆ.

ಶಾಸಕ ರವಿಶಂಕರ್ ಕಪಾಳಮೋಕ್ಷ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ತಾಳ್ಮೆ ಕಳೆದುಕೊಂಡ MLA ಡಿ.ರವಿಶಂಕರ್ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ನಾನು ಉಗ್ರಗಾಮಿ ಇದ್ದಂತೆ.. ಕನ್ನಡಿಗರ ವಿರೋಧಿ – ಮೆಟ್ರೋ ಸ್ಟೇಷನ್ ಬ್ಲಾಸ್ಟ್ ಮಾಡೋದಾಗಿ ಇ-ಮೇಲ್ ಬೆದರಿಕೆ!
Author: Btv Kannada
Post Views: 198







