ಬೆಂಗಳೂರು : ಕೌಟುಂಬಿಕ ಕಲಹದಿಂದ ವಿವಾಹಿತ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಡ್ವಿನಿ (28) ಆತ್ಮಹತ್ಯೆಗೆ ಶರಣಾದ ಮಹಿಳೆ.
ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಆರು ವರ್ಷಗಳ ಹಿಂದೆ ಎಡ್ವಿನಿ- ಮಣಿ ಎಂಬುವವರಿಬ್ಬರು ಮದುವೆಯಾಗಿದ್ದರು. ಮಣಿ ಕಾರ್ ಡ್ರೈವರ್ ಆಗಿ ವೃತ್ತಿ ಮಾಡುತ್ತಿದ್ದ. ದಂಪತಿಗಳ ನಡುವೆ ಆಗಾಗ ಸಣ್ಣಪುಟ್ಟ ವಿಚಾರಗಳಿಗೂ ಜಗಳ ನಡೆಯುತ್ತಿತ್ತು.

ಬೆಳಗ್ಗೆ ಮಣಿ ದೇವಸ್ಥಾನಕ್ಕೆ ಹೋಗಿ ಬರ್ತೆನೆಂದು ಹೋಗಿದ್ದ. ಮಧ್ಯಾಹ್ನ ಮಣಿ ಮನೆಗೆ ವಾಪಸ್ ಬಂದಾಗ, ಪತ್ನಿ ಎಡ್ವಿನಿ ಅವರು ನೇಣು ಬಿಗಿದುಕೊಂಡಿದ್ದದಳು. ಇದೀಗ ಗಂಡನೇ ಹೆಂಡತಿಯನ್ನು ಕೊಲೆ ಮಾಡಿದ್ದಾನೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ಮೃತಳ ಪೋಷಕರು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪತಿ ಮಣಿ ವಿರುದ್ಧ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : ನಾನು ಉಗ್ರಗಾಮಿ ಇದ್ದಂತೆ.. ಕನ್ನಡಿಗರ ವಿರೋಧಿ – ಮೆಟ್ರೋ ಸ್ಟೇಷನ್ ಬ್ಲಾಸ್ಟ್ ಮಾಡೋದಾಗಿ ಇ-ಮೇಲ್ ಬೆದರಿಕೆ!







