ನಾನು ಉಗ್ರಗಾಮಿ ಇದ್ದಂತೆ.. ಕನ್ನಡಿಗರ ವಿರೋಧಿ – ಮೆಟ್ರೋ ಸ್ಟೇಷನ್ ಬ್ಲಾಸ್ಟ್ ಮಾಡೋದಾಗಿ ಇ-ಮೇಲ್‌ ಬೆದರಿಕೆ!

ಬೆಂಗಳೂರು : ನಗರದ ಶಾಲೆಗಳು ಮತ್ತು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದ ಬೆನ್ನಲ್ಲೇ ಇದೀಗ ನಮ್ಮ ಮೆಟ್ರೋ ಸರದಿ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ (BMRCL) ಅಧಿಕೃತ ಇ-ಮೇಲ್‌ಗೆ ಅಪರಿಚಿತ ವ್ಯಕ್ತಿಯಿಂದ ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುವುದಾಗಿ ಗಂಭೀರ ಬೆದರಿಕೆ ಸಂದೇಶ ಬಂದಿದೆ.

ನವೆಂಬರ್ 14 ರ ರಾತ್ರಿ 11.30 ರ ಸುಮಾರಿಗೆ BMRCL ನ ಅಧಿಕೃತ ಇ-ಮೇಲ್​ಗೆ ಬೆದರಿಕೆ ಸಂದೇಶ ಬಂದಿದೆ. ಇ-ಮೇಲ್ ಕಳುಹಿಸಿದ ವ್ಯಕ್ತಿ, ನನ್ನ ವಿಚ್ಛೇದಿತ ಪತ್ನಿಗೆ ನಮ್ಮ ಮೆಟ್ರೋ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ. ನಿಮ್ಮ ಒಂದು ಮೆಟ್ರೋ ನಿಲ್ದಾಣವನ್ನು ಬ್ಲಾಸ್ಟ್ ಮಾಡಬೇಕಾಗುತ್ತದೆ, ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾನೆ. ಬೆದರಿಕೆ ಹಾಕಿರುವ ಈ ಆಸಾಮಿ, ನಾನು ಒಬ್ಬ ಉಗ್ರಗಾಮಿ ಇದ್ದಂತೆ, ಅದರಲ್ಲೂ ಕನ್ನಡಿಗರ ವಿರುದ್ಧ ಎಂದು ಇ-ಮೇಲ್‌ನಲ್ಲಿ ತಿಳಿಸಿರುವುದು ಆತಂಕಕಾರಿಯಾಗಿದೆ.

ಬೆದರಿಕೆ ಇ-ಮೇಲ್ ಅನ್ನು ಪರಿಶೀಲಿಸಿದ BMRCL ಅಧಿಕಾರಿಗಳು ತಕ್ಷಣವೇ ಈ ಕುರಿತು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ವಿಲ್ಸನ್ ಗಾರ್ಡನ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇ-ಮೇಲ್ ಕಳುಹಿಸಿದ ಅಪರಿಚಿತ ವ್ಯಕ್ತಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ : “ಕೊರಗಜ್ಜ” ಸಿನಿಮಾದ ಬಗ್ಗೆ ಸಾಕ್ಷ್ಯಚಿತ್ರ ಪ್ರಸಾರಮಾಡಿದ ದೂರದರ್ಶನ!

Btv Kannada
Author: Btv Kannada

Read More