“ಕೊರಗಜ್ಜ” ಸಿನಿಮಾದ ಬಗ್ಗೆ ಸಾಕ್ಷ್ಯಚಿತ್ರ ಪ್ರಸಾರಮಾಡಿದ ದೂರದರ್ಶನ!

ಒಂದು ಸಿನಿಮಾದ ಬಗ್ಗೆ ದೂರದರ್ಶನ ವಾಹಿನಿಯು ಸಾಕ್ಷ್ಯಚಿತ್ರ ನಿರ್ಮಿಸಿ ಪ್ರಸಾರ ಮಾಡಲು ಸಾಧ್ಯವೇ ? ಇಂತಹ ಪ್ರಶ್ನೆಯನ್ನು “ಕೊರಗಜ್ಜ” ಚಿತ್ರ ಸಾಧ್ಯವಾಗಿಸಿದೆ. ಹೌದು… ಮಹಾರಾಷ್ಟ್ರ ದೂರದರ್ಶನದ ಸಹ್ಯಾದ್ರಿ ವಾಹಿನಿಯು ಸುಧೀರ್ ಅತ್ತಾವರ್ ನಿರ್ದೇಶನದ “ಕೊರಗಜ್ಜ”ಸಿನಿಮಾದ ಕುರಿತು ತನ್ನ ವಾಹಿನಿಯಲ್ಲಿ ನಿನ್ನೆ ರಾತ್ರಿ 10.30ಕ್ಕೆ ಡಾಕ್ಯುಮೆಂಟರಿ ಒಂದನ್ನು ಪ್ರಸಾರ ಮಾಡಿ ಹೊಸ ವಿಕ್ರಮ ಸ್ಥಾಪಿಸಿದೆ. ಅಲ್ಲದೆ ಇಂದು ಮರುಪ್ರಸಾರ ಸಹ ಮಾಡುತ್ತಿದೆ. ದೂರದರ್ಶನ ಪ್ರಸಾರಭಾರತಿಯ “ವೇವ್ಸ್” ಒಟಿಟಿ ಪ್ಲಾಟ್ ಫಾರ್ಮ್​ನಲ್ಲೂ ಈ ಸಾಕ್ಷ್ಯಾ ಚಿತ್ರ ಲಭ್ಯವಾಗುತ್ತೆ.

ಅತ್ಯಂತ ವಿಭಿನ್ನವಾಗಿ ನಡೆದ ಇಡೀ ದಿನದ ಆಡಿಯೋಲಾಂಚ್ ಮತ್ತು ಅದರ ಪ್ರಯುಕ್ತ ನಡೆದ ಕೋಲಸೇವೆ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಪತ್ರಕರ್ತರಿಂದ ಮನಃ ಪೂರ್ವಕ ಪ್ರಶಂಸೆಗಳ ಸುರಿಮಳೆಗೆ ಕಾರ್ಯಕ್ರಮ ಗ್ರಾಸವಾಯ್ತು. ತ್ರಿವಿಕ್ರಮ ಸಪಲ್ಯ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಬ್ಯಾನರ್ ಅಡಿಯ ಕೊರಗಜ್ಜ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಮಂಗಳೂರಿನಲ್ಲಿ ಇತ್ತೀಚೆಗೆ ಅಖಿಲ ಭಾರತ ಮಟ್ಟದ ಸುದ್ದಿಗೋಷ್ಠಿ ನಡೆಸಿ, ದೆಹಲಿ, ಮುಂಬಾಯಿ, ಚಂಡಿಗಡ್, ಹೈದರಾಬಾದ್, ಕೊಚ್ಚಿ, ಬೆಂಗಳೂರು, ಮಂಗಳೂರು ಹೀಗೆ ದೇಶದ ಹಲವಾರು ಭಾಗಗಳಿಂದ ಆಗಮಿಸಿದ್ದ ಪತ್ರಕರ್ತರ ಸಮ್ಮುಖದಲ್ಲಿ ಸಿನಿಮಾ ತಂಡ ಜೀ಼ ಮ್ಯೂಜಿಕ್ ಮುಖಾಂತರ ಚಿತ್ರದ ಆಡಿಯೋ ಲಾಂಚ್ ಮಾಡಿ ಹೊಸ ದಾಖಲೆ ಬರೆದಿದೆ. ಅದೇ ದಿನ ರಾತ್ರಿ ಸಹಸ್ರಾರು ಜನರ ಮತ್ತು ಇನ್ನೂರಕ್ಕಿಂತಲೂ ಹೆಚ್ಚಿನ ಪತ್ರಕರ್ತರ ಸಮ್ಮುಖದಲ್ಲಿ “ಕೊರಗಜ್ಜ”ದೈವದ ವಿಜ್ರಂಭಣೆಯ ಕೋಲ ಸೇವೆ ಕೂಡಾ ನಡೆಸಿತ್ತು. ದೇಶಾದ್ಯಂತ ಬಂದಿದ್ದ ಪತ್ರಕರ್ತರಿಗೆ ಇದು ಹೊಸ ಅನುಭವ ಆಗಿದ್ದರಿಂದ ಪ್ರಿಂಟ್, ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ದೇಶಾದ್ಯಂತ ಕೊರಗಜ್ಜ ಚಿತ್ರದ ಸುದ್ದಿಗಳು ಎಗ್ಗಿಲ್ಲದೆ ಹರಿದಾಡಲಾರಂಭಿಸಿದೆ.

ಸುಮಾರು 15 ವರ್ಷಗಳಿಂದ ಹತ್ತಾರು ನಿರ್ಮಾಪಕರು, ನಿರ್ದೇಶಕರು ಕೊರಗಜ್ಜನ ಬಗ್ಗೆ ಚಿತ್ರ ನಿರ್ಮಿಸಲು ಯತ್ನಿಸಿದ್ದರು. ಆದರೆ ಸುಧೀರ್ ಅತ್ತಾವರ್ ಪ್ರಾಜೆಕ್ಟ್ ಕೈಗೆತ್ತಿಕೊಂಡ ಮೇಲೆ ಹೊಸ ಹೊಸ ಘಟನೆಗಳಿಗೆ, ನವೀನ ವಿಚಾರಗಳಿಗೆ ಚಿತ್ರ ಸಾಕ್ಷಿಯಾಗುತ್ತಿದೆ. ಇಡೀ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜೈಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ಈ ವಿಚಾರವನ್ನು ಚಿತ್ರ ತಂಡ ಗೌರವಾರ್ಪಣೆ ಸಲ್ಲಿಸಿದ ಸಂದರ್ಭದಲ್ಲಿ ತಿಳಿಸಿದರು.

ಇಡೀ ಕಾರ್ಯಕ್ರಮವನ್ನು ನಿರ್ದೇಶಕ ಸುಧೀರ್ ಅತ್ತಾವರ್‌ ಮತ್ತು ಇಪಿ ವಿದ್ಯಾಧರ್ ಶೆಟ್ಟಿ ಅತ್ಯಂತ ಬಿಭಿನ್ನ ಶೈಲಿಯಲ್ಲಿ‌ ವಿನ್ಯಾಸಗೊಳಿಸಿದ್ದರು. ನಮ್ಮ ನಾಡ ಗೀತೆ “ಜೈ ಭಾರತ ಜನನಿಯ ತನುಜಾತೆ” ಮೊಳಗಿದಾಗ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದ್ದರು. ಅಂದಿನ ಕಾರ್ಯಕ್ರಮದಲ್ಲಿ ದೆಹಲಿ ಬಾಂಬ್ ಸ್ಫೋಟದಲ್ಲಿ ಹತರಾದವರಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿದ ನಂತರ ಯಕ್ಷಗಾನದ ಥೀಮ್ ಇಟ್ಟುಕೊಂಡು ಇಡೀ ಕಾರ್ಯಕ್ರಮವನ್ನು ಪೋಣಿಸಲಾಗಿತ್ತು.

ಮೊದಲಿಗೆ ಯಕ್ಷಗಾನ ಬಾಲಗೋಪಾಲರಿಂದ ಪ್ರಾರ್ಥನೆ, ಹಲವಾರು ವೇಷದಾರಿಗಳ ಜೊತೆ ವಿಪ್ರರ ವೇದಘೋಷಗಳ ಸಮೇತ ಡೊಳ್ಳು, ಕೊಂಬು, ಕಹಳೆ, ಚೆಂಡೆವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ತಂದಿರಿಸಿದ ಎರಡು ಬ್ರಹತ್ ಗಾತ್ರದ ಜೀ಼ ಮ್ಯೂಸಿಕ್​ನ ಲೋಗೋ, ಕಟೌಟ್​ಗಳ ಮಧ್ಯದಿಂದ ಆಗಮಿಸಿದ ಜೀ಼ ಯ ವೈಸ್ ಪ್ರೆಸಿಡೆಂಟ್, ಹಳೆಯ ಗ್ರಮಾಫೋನ್ ಮುಖಾಂತರ ಖ್ಯಾತ ಕಲಾವಿದರಾದ ಭವ್ಯ ಮತ್ತು ಶ್ರತಿ ಬಿಡುಗಡೆ ಗೊಳಿಸಿದ ಚಿತ್ರದ ಆಡಿಯೋ ಹೀಗೆ ಅತ್ಯಂತ ವೈಷ್ಟ್ಯಪೂರ್ಣವಾದ ಕಾರ್ಯಕ್ರಮ ಬಹುಶಃ ಮುಂಬಾಯಿಯ ದೂರದರ್ಶನ ಒಂದು ಡಾಕ್ಯುಮೆಂಟರಿ ಮಾಡಲು ಪ್ರೇರೇಪಿಸಿರಬಹುದು.

ಇದನ್ನೂ ಓದಿ : ಮನೆ ಮುಂದೆ ಗಲಾಟೆ ಮಾಡ್ಬೇಡಿ ಅಂದಿದ್ದಕ್ಕೆ ಪುಂಡರ ದಾಂಧಲೆ – ಬೈಕ್​ಗಳ ಮೇಲೆ ಕಲ್ಲು ಎತ್ತಿಹಾಕಿದ ಕಿಡಿಗೇಡಿಗಳು!

Btv Kannada
Author: Btv Kannada

Read More