ಬೆಂಗಳೂರು : ಸರ್ಕಾರಿ ಕಚೇರಿಗಳಲ್ಲಿ ಲಂಚ ಕೊಟ್ರೇನೆ ನಮ್ ಕೆಲಸ ಆಗೋದು ಅಂತಾ ಜನ ಡಿಸೈಡ್ ಮಾಡಿಕೊಂಡಿದ್ದಾರೆ. ಇದೇನು ರೂಲ್ಸ್ ಅಲ್ಲ ಆದ್ರೂ ಜನ ಸರ್ಕಾರಿ ಅಧಿಕಾರಿಗಳಿಗೆ ಲಂಚ ಕೊಟ್ಟೇ ಅವರ ಕೆಲಸ ಮಾಡಿಸ್ಕೋತಾರೆ. ಹಾಗೆಯೇ BDAನಲ್ಲೂ ಯಾವುದೇ ಕೆಲಸ ಆಗಬೇಕು ಅಂದ್ರೆ ಪ್ರತಿಯೊಂದಕ್ಕೂ ಲಂಚ ಕೊಡಲೇಬೇಕು. ಇದು ಹೆಸರಿಗಷ್ಟೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ.. ಆದ್ರೆ, ಮೂಲೆ ಮೂಲೆಲೂ ಲಂಚಾವತಾರ ತಾಂಡವವಾಡುತ್ತಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ದಶಕಗಳಿಂದ ಭ್ರಷ್ಟಾಚಾರದ ಕೂಪವಾಗಿದೆ. BDAಗೆ ಹೋಗೋ ಜನ ಕೂಡ ಲಂಚ ಕೊಡ್ಬೇಕು ಅಂತಾ ಮೆಂಟಲಿ ಫಿಕ್ಸ್ ಆಗೇ ಹೋಗ್ತಾರೆ. BDA ಲಂಚದ ಲೋಕದಲ್ಲಿ, ಭ್ರಷ್ಟರ ಕೋಟೆಯಲ್ಲೀಗ IAS ಅಧಿಕಾರಿಯ ‘ಮಹಾ’ ಕ್ರಾಂತಿ ನಡೆಯುತ್ತಿದೆ. ಭ್ರಷ್ಟಾಚಾರದ ಕೂಪವಾಗಿರುವ BDAಗೆ ಮೇಜರ್ ಮಣಿವಣ್ಣನ್ ಅವರು ಆಶಾಕಿರಣವಾಗಿ ಬಂದಿದ್ದಾರೆ.

ಹೌದು.. ಲಂಚಕೋರರೇ ತುಂಬಿರುವ BDAನಲ್ಲಿ IAS ಮೇಜರ್ ಮಣಿವಣ್ಣನ್ ಅವರ ‘ಪ್ರಾಮಾಣಿಕತೆ’ ಕ್ರಾಂತಿ ಶುರುವಾಗಿದೆ. ಮೇಜರ್ ಮಣಿವಣ್ಣನ್ ಅವರು 1998ರ ಬ್ಯಾಚ್ನ ಖಡಕ್ ಹಾಗೂ ಹಿರಿಯ IAS ಅಧಿಕಾರಿಯಾಗಿದ್ದು, ಇವರು 3 ತಿಂಗಳ ಹಿಂದೆಯಷ್ಟೇ BDAಗೆ ಕಮಿಷನರ್ ಆಗಿ ಬಂದಿದ್ದಾರೆ. BDA ಆಡಳಿತಕ್ಕೆ ಮೇಜರ್ ಮಣಿವಣ್ಣನ್ ಅವರು ಮಾಡಿರೋ ‘ಆಪರೇಷನ್ ಕ್ಲೀನ್’ ಡಿಟೇಲ್ಸ್ ಇಲ್ಲಿದೆ.

BDA ಆಯುಕ್ತರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಮೇಜರ್ ಮಣಿವಣ್ಣನ್ ಅವರ ಆಡಳಿತ ಪರ್ವ ಆರಂಭವಾಗಿದ್ದು, BDAನಲ್ಲಿ ನಡೆಯುತ್ತಿದ್ದ ಬೃಹತ್ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮೇಜರ್ ಮಣಿವಣ್ಣನ್ ಅವರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಅಧಿಕಾರಿಗಳಿಂದ ಲಂಚದ ಶೋಷಣೆಗೆ ಒಳಗಾಗಿರುವ ಸಾಮಾನ್ಯ ಜನರಿಗಾಗಿಯೇ ಕೆಲವೊಂದು ಯೋಜನೆ ಮಾಡಿದ್ದಾರೆ.
ಕೋಟಿ ಕೋಟಿ ಬೆಂಗಳೂರಿಗರ ಕುಂದುಕೊರತೆ ನಿವಾರಿಸಲು ಮೇಜರ್ ಮಣಿವಣ್ಣನ್ ಅವರು ಸಾಥ್ ಕೊಟ್ಟಿದ್ದಾರೆ. ಸಾಮಾನ್ಯ ಜನರಿಗೂ ಸರ್ಕಾರದ ಸವಲತ್ತು ಸಿಗುವಂತೆ BDA ಆಡಳಿತಕ್ಕೆ ಮೇಜರ್ ಸರ್ಜರಿ ನಡೆಸಿದ್ದಾರೆ.

ಬಡವರು, ಸಾಮಾನ್ಯ ಜನರಿಗಾಗಿ ಹಿರಿಯ IAS ಮೇಜರ್ ಮಣಿವಣ್ಣನ್ ಅವರು ಖುದ್ದಾಗಿ ಅಖಾಡಕ್ಕಿಳಿದಿದ್ದಾರೆ. ಏನೇ ದೂರು, ದುಮ್ಮಾನ, ಸಮಸ್ಯೆಗಳು, ಕೆಲಸಗಳಿದ್ರೂ ಜನರಿಗೆ ನೇರವಾಗಿ ಭೇಟಿಗೆ ಅವಕಾಶ ಕಲ್ಪಿಸಿದ್ದಾರೆ. BDAನಲ್ಲಿರುವ ಎಲ್ಲಾ ಅಧಿಕಾರಿಗಳ ಜೊತೆಯಲ್ಲಿ ಜನರ ಸೇವೆಗೆ ಮೇಜರ್ ಮಣಿವಣ್ಣನ್ ಅವರು ನಿಂತಿದ್ದಾರೆ. ಮೇಜರ್ ಮಣಿವಣ್ಣನ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 4 ವಿಭಾಗದ ಆಫೀಸರ್ಸ್ ಜೊತೆಗೂ ಕುಳಿತು ಕೆಲಸ ಮಾಡ್ತಿದ್ದಾರೆ. ಹಿರಿಯ IAS ಮೇಜರ್ ಮಣಿವಣ್ಣನ್ ಅವರು ಸ್ಥಳದಲ್ಲೇ ಸಮಸ್ಯೆ ಆಲಿಸಿ, ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ಕೊಡೋದು ವಿಶೇಷ.
ಈಗ ಒಂದೇ ಒಂದು ರೂಪಾಯಿ ಲಂಚ ಕೊಡದೇ ಜನ ಸಾಮಾನ್ಯರು ಕೆಲಸ ಮಾಡಿಸಬಹುದು. BDAಯಿಂದ ಬಡವರು, ಜನ ಸಾಮಾನ್ಯರಿಗಾಗಿಯೇ ಹೆಲ್ಪ್ಲೈನ್ ಸಂಖ್ಯೆ 9483166622. ಏನೇ ದೂರು, ಸಮಸ್ಯೆಗಳು, ಕೆಲಸಗಳಿದ್ರೂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೂ ಹೆಲ್ಪ್ಲೈನ್ 9483166622 ಆ್ಯಕ್ಟೀವ್ ಆಗುತ್ತೆ.
IAS ಮೇಜರ್ ಮಣಿವಣ್ಣನ್ ಮಾಡ್ತಿರುವ ಐತಿಹಾಸಿಕ ಕೆಲಸಕ್ಕೆ ಭರಪೂರ ಹೊಗಳಿಕೆಗಳು ಹರಿದುಬರುತ್ತಿದೆ. ಇದುವರೆಗೂ ನಮಗೂ ಕೂಡ ಲಂಚ ಕೊಡದೇ ಕೆಲಸ ಆಗಲ್ಲ ಅನ್ನೋ ನಂಬಿಕೆ ಇರಲಿಲ್ಲ. ಆದರೆ ಇದಕ್ಕೆಲ್ಲಾ ಯೂಟ್ಯೂಬ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಸ್ ಸಾಕ್ಷ್ಯ ಇವೆ. ಮೇಜರ್ ಮಣಿವಣ್ಣನ್ ಕಾರ್ಯಕ್ಕೆ ಜನ ಸಾಮಾನ್ಯರು ಹೇಳ್ತಿದ್ದಾರೆ ಅಭಿನಂದನೆಗಳ ಸಾಗರ ಹರಿದುಬರುತ್ತಿದೆ.
ಇದನ್ನೂ ಓದಿ : ಸೌದಿ ಅರೇಬಿಯಾದಲ್ಲಿ ಭೀಕರ ಬಸ್ ದುರಂತ – 42 ಭಾರತೀಯ ಹಜ್ ಯಾತ್ರಿಕರು ಸಜೀವ ದಹನ!







