ಬಿಹಾರದಲ್ಲಿ ನಡೆದ ವಿಧಾಸಭಾ ಚುನಾವಣೆಯಲ್ಲಿ NDA ಬಹುಮತ ಪಡೆದು ಭರ್ಜರಿ ಗೆಲುವು ಸಾಧಿಸಿದೆ. ಇದೇ ನವೆಂಬರ್ 20ರಂದು ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮ ನೆರವೇರಲಿದ್ದು, ಬಿಹಾರದ 10ನೇ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೀಗ ಸಿಎಂ ನಿತೀಶ್ ಕುಮಾರ್ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ 243 ಸ್ಥಾನಗಳಲ್ಲಿ 202 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‌ಡಿಎ ನಾಲ್ಕನೇ ಮೂರು ಭಾಗದಷ್ಟು ಬಹುಮತವನ್ನು ಗಳಿಸಿತ್ತು.
ಬಿಹಾರದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಆರಂಭವಾಗಿದೆ. ರಾಜಭವನದಲ್ಲಿ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ನ.19 ರಂದು ವಿಧಾನಸಭೆ ವಿಸರ್ಜನೆಗೊಳ್ಳಲಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ನಂತರ, ಬಿಹಾರ ಸಚಿವ ಸಂಪುಟ ಸೋಮವಾರ ವಿಧಾನಸಭೆಯನ್ನು ವಿಸರ್ಜಿಸುವ ಪ್ರಸ್ತಾವನೆಯನ್ನು ಅಂಗೀಕರಿಸಿತು. ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸರ್ಕಾರದ ಅಂತಿಮ ಸಚಿವ ಸಂಪುಟ ಸಭೆಯ ನಂತರ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದರು.
ನವೆಂಬರ್ 20ರಂದು ಬಿಹಾರದ 10ನೇ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದು, ಈಗಾಗಲೇ ನಿತೀಶ್ ಕುಮಾರ್ ಪದಗ್ರಹಣಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.
ನಿತೀಶ್ ಕುಮಾರ್ ಅವರು ಚಿರಾಗ್ ಪಾಸ್ವಾನ್ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ನಿತೀಶ್ ಸರ್ಕಾರದಲ್ಲಿ ಚಿರಾಗ್ ಪಾಸ್ವಾನ್ಗೆ ಡಿಸಿಎಂ ಪಟ್ಟ ಸಿಗುವ ಸಾಧ್ಯತೆಯಿದೆ. ಚಿರಾಗ್ ಪಾಸ್ವಾನ್ LJP ಪಕ್ಷಕ್ಕೆ NDA 29 ಸ್ಥಾನ ಹಂಚಿದ್ದು, ಈ ಪೈಕಿ ಪಕ್ಷ 19 ಕ್ಷೇತ್ರಳಲ್ಲಿ LJP ಗೆಲುವು ಸಾಧಿಸಿದೆ. ಹೀಗಾಗಿ ಚಿರಾಗ್ ಪಾಸ್ವಾನ್ಗೆ ʻಯಂಗ್ ಗನ್ʼ ಪಟ್ಟ ಸಿಗಲಿದೆ
ಇದನ್ನೂ ಓದಿ : ಬೆಂಗಳೂರಲ್ಲಿ ಬರ್ಬರ ಹತ್ಯೆ – ಮಾರಾಕಾಸ್ತ್ರಗಳಿಂದ ಇರಿದು ಮಹಿಳೆಯ ಕೊಲೆ!







