ಬೆಂಗಳೂರಲ್ಲಿ ಬರ್ಬರ ಹತ್ಯೆ – ಮಾರಾಕಾಸ್ತ್ರಗಳಿಂದ ಇರಿದು ಮಹಿಳೆಯ ಕೊಲೆ!

ಬೆಂಗಳೂರು : ಮಾರಾಕಾಸ್ತ್ರಗಳಿಂದ ಇರಿದು ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿರುವ ಘಟನೆ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯ ಹೊಂಗಸಂದ್ರದಲ್ಲಿ ನಡೆದಿದೆ. 35 ವರ್ಷದ ಪ್ರಮೋದಾ ಮೃತ ದುರ್ದೈವಿ.

ಉತ್ತರ ಕನ್ನಡ ಜಿಲ್ಲೆಯ ಶಿರಿಸಿ ಮೂಲದ ಮಹಿಳೆ ಪ್ರಮೋದಾ ಸುರೇಶ್ ಎಂಬಾತನನ್ನು ಮದುವೆಯಾಗಿದ್ದರು. ಸುರೇಶ್ ಪ್ರಮೋದಾ & ಆಕೆ ಸಹೋದರಿಯನ್ನೂ ಮದುವೆಯಾಗಿದ್ದ. ಪ್ರಮೋದಾ ಪತಿಯಿಂದ ದೂರಾಗಿ ಪ್ರತ್ಯೇಕವಾಗಿ ವಾಸವಿದ್ದಳು.

ಅನೈತಿಕ ಸಂಬಂಧ ಹಿನ್ನೆಲೆ ಪ್ರಮೋದಾಳನ್ನು ಕೊಲೆ‌ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಬೊಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ನವೆಂಬರ್ ಕ್ರಾಂತಿಗೆ ಕ್ಷಣಗಣನೆ – ಇಂದು ದೆಹಲಿಗೆ ದೌಡಾಯಿಸಲಿರುವ ಸಿಎಂ ಸಿದ್ದರಾಮಯ್ಯ!

Btv Kannada
Author: Btv Kannada

Read More