ಬಿಹಾರ ಸಿಎಂ ಕುರ್ಚಿ ನಿತೀಶ್‌ಗೆ, ಬಿಜೆಪಿ-ಎಲ್‌ಜೆಪಿಗೆ ಡಿಸಿಎಂ ಸ್ಥಾನ – ಸೀಟು ಹಂಚಿಕೆ ಫೈನಲ್!

ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ NDA ಬಹುಮತ ಪಡೆದು ಭರ್ಜರಿ ಗೆಲುವು ಸಾಧಿಸಿದೆ. ಮಹಾಘಟಬಂದನ್ ಹೀನಾಯ ಸೋಲು ಕಂಡಿದ್ದು ಅಷ್ಟೇ ಅಲ್ಲದೆ  ಇದೀಗ ಮೈತ್ರಿಯಲ್ಲೇ ಕೋಲಾಹಲಗಳು ಶುರುವಾಗಿದೆ. NDA ಮೈತ್ರಿ ಪಕ್ಷಗಳು ಸರ್ಕಾರ ರಚನೆಯಲ್ಲಿ ನಿರತವಾಗಿದ್ದು, ಈ ಬಾರಿ ಸಿಎಂ ಯಾರು ಅನ್ನೋ ಕುತೂಹಲಕ್ಕೆ ಬಹುತೇಕ ಅಂತಿಮ ಚರ್ಚೆ ನಡೆದಿದೆ.

ಚುನಾವಣೆ ವೇಳೆ ಸೀಟು ಹಂಚಿಕೆಯಲ್ಲಿ ತೆಗೆದುಕೊಂಡ ಅದೇ ಸೂತ್ರದಲ್ಲಿ ಇದೀಗ ಅಧಿಕಾರ ಹಂಚಿಕೆಯೆನ್ನು ಮಾಡಲು ಹೈಕಮಾಂಡ್ ನಿರ್ಧರಿಸಿದೆ. ಹೀಗಾಗಿ ನಿತೀಶ್ ಕುಮಾರ್ ನೇತೃತ್ವದ JDUಗೆ ಮುಖ್ಯಮಂತ್ರಿ ಸ್ಥಾನ, ಬಿಜೆಪಿ ಹಾಗೂ ಎಲ್‌ಜೆಪಿಗೆ ತಲಾ ಒಂದೊಂದು ಉಪ ಮುಖ್ಯಮಂತ್ರಿ ಸ್ಥಾನ ನೀಡಲು ನಿರ್ಧರಿಸಲಾಗಿದೆ.

JDUಗೆ ಮುಖ್ಯಮಂತ್ರಿ ಸ್ಥಾನ ನೀಡೋದು ಬಹುತೇಕ ಫಿಕ್ಸ್ ಆಗಿದೆ. ಹೀಗಾಗಿ ನಿತೀಶ್ ಕುಮಾರ್ ಬಿಹಾರದಲ್ಲಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ. ಜೊತೆಗೆ ಜೆಡಿಯುಗೆ 14 ಸಚಿವ ಸ್ಥಾನಗಳು ಸಿಗಲಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಅಭೂತಪೂರ್ವ ಗೆಲುವು ಸಾಧಿಸಿರುವ NDA ಸರ್ಕಾರ ರಚನೆ ಮಾಡಲು ತಯಾರಿ ನಡೆಸುತ್ತಿದೆ.

ನಾಳೆ NDA ಲೆಜಿಸ್‌ಲೆಟೀವ್ ಅಸೆಂಬ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಬಳಿಕ ಈ ನಾಯಕ ರಾಜ್ಯಪಾಲರ ಭೇಟಿಯಾಗಿ ಸರ್ಕಾರ ರಚನೆಗೆ ಅವಕಾಶ ಕೋರಲಿದ್ದಾರೆ. ಸೂತ್ರದ ಪ್ರಕಾರ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಲಿದ್ದಾರೆ. ಹೀಗಾಗಿ ರಾಜ್ಯಪಾಲ ಆರೀಫ್ ಮೊಹಮ್ಮದ್ ಭೇಟಿಯಾಗಿ ಸರ್ಕಾರ ರಚನಗೆ ಮನವಿ ಸಲ್ಲಿಸಲಿದ್ದಾರೆ. ನವೆಂಬರ್ 19 ಅಥವಾ 20 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಇದಕ್ಕೂ ಮೊದಲು ಅಂದರೆ ನವೆಂಬರ್ 17 ರಂದು ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕ ರಾಜೀನಾಮೆ ನೀಡಲಿದ್ದಾರೆ.

ಇದನ್ನೂ ಓದಿ : ಮೈಸೂರಿನ ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ – FIR ದಾಖಲು!

Btv Kannada
Author: Btv Kannada

Read More