ಯಾದಗಿರಿ : KSRTC ಬಸ್ ಹರಿದು ಎರಡು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಸುರಪುರ ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ನಡೆದಿದೆ. 2 ವರ್ಷದ ಲಕ್ಷ್ಮಿ ಮೃತ ಮಗು.

ಕೂಡಲಗಿ ಗ್ರಾಮದಿಂದ ಸುರಪುರಕ್ಕೆ ಹೊರಟಿದ್ದ KA 33 F 0346 ಸಂಖ್ಯೆಯ ಸಾರಿಗೆ ಇಲಾಖೆಯ ಬಸ್ ಆಕಸ್ಮಿಕವಾಗಿ ಮಗುವಿನ ಮೇಲೆ ಹರಿದಿದ್ದು, ಮಗುವಿನ ದೇಹವು ಛಿದ್ರ ಛಿದ್ರಗೊಂಡಿದೆ.

ಈ ದುರ್ಘಟನೆಯಿಂದ ಮಗು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳದಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆಯು ಕೆಂಭಾವಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಕಲಬುರಗಿಯಲ್ಲಿ ಭೀಕರ ಅಪಘಾತ – ಧಗಧಗನೆ ಹೊತ್ತಿ ಉರಿದ ಬೈಕ್.. ಇಬ್ಬರು ಸಜೀವ ದಹನ!
Author: Btv Kannada
Post Views: 332







