ಬೆಂಗಳೂರಲ್ಲಿ ಮುಂದುವರಿದ ರಾಬರ್ಸ್ ಗ್ಯಾಂಗ್ ಹಾವಳಿ – ರಾತ್ರಿ ವೇಳೆ ಖಾಲಿ ರಸ್ತೆಗಳನ್ನೇ ಟಾರ್ಗೆಟ್ ಮಾಡ್ತಿರುವ ಖದೀಮರು!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ರಾಬರ್ಸ್ ಗ್ಯಾಂಗ್‌ಗಳ ಹಾವಳಿ ಮುಂದುವರಿದಿದ್ದು, ಖದೀಮರು ರಾತ್ರಿ ವೇಳೆ ಖಾಲಿ ರಸ್ತೆಗಳನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ಖದೀಮರು ದರೋಡೆಗೆ ಯತ್ನಿಸಿರುವ ಘಟನೆ ಶಾಂತಿನಗರದ ಬಳಿಯ ಚರ್ಚ್ ರೋಡ್‌ನಲ್ಲಿ ನಡೆದಿದ್ದು, ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನ.15 ರಂದು, ಬೆಳಗ್ಗಿನ ಜಾವ 4:30 ರ ಸುಮಾರಿಗೆ ಈ ಘಟನೆ ನಡೆದಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ಓರ್ವ ಸವಾರರನ್ನು ಮೂವರು ಖದೀಮರ ಗ್ಯಾಂಗ್ ಅಡ್ಡಗಟ್ಟಿ ನಿಲ್ಲಿಸಿದೆ. ಬೈಕ್‌ನಲ್ಲಿ ಬಂದಿದ್ದ ಈ ಮೂವರು ರಾಬರ್ಸ್‌ಗಳು, ಬೈಕ್ ಸವಾರನಿಂದ ಮೊಬೈಲ್‌ ಮತ್ತು ಹಣ ದೋಚಲು ಮುಂದಾಗಿದ್ದರು. ಈ ವೇಳೆ ಬೈಕ್ ಸವಾರರು ಖದೀಮರ ವಿರುದ್ಧ ಬೀಳುತ್ತಿದ್ದಂತೆ ರಾಬರ್ಸ್​ಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ರಾಬರ್ಸ್‌ಗಳು ದರೋಡೆಗೆ ಯತ್ನಿಸಿದ ಈ ಸಂಪೂರ್ಣ ಕೃತ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ : ಅರಣ್ಯ ಇಲಾಖೆ ತಪಾಸಣೆ ವೇಳೆ ಕಾರಿನ ಹಿಂಭಾಗದಲ್ಲಿ ಮಹಿಳೆಯ ಶವ ಪತ್ತೆ – ಮೂವರ ಬಂಧನ!

Btv Kannada
Author: Btv Kannada

Read More