ರೌಡಿಶೀಟರ್‌ಗಳ ನಡುವೆ ಗ್ಯಾಂಗ್ ವಾರ್, ಕೊಲೆಗೆ ಸುಪಾರಿ ಆರೋಪ – 5 ಲಕ್ಷ ಅಡ್ವಾನ್ಸ್ ಪಡೆದಿದ್ದ ಇಬ್ಬರು ವಶ!

ಹಾವೇರಿ : ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತೆಗ್ಗಿಹಳ್ಳಿ ಗ್ರಾಮದಲ್ಲಿ ಎರಡು ರೌಡಿಶೀಟರ್ ಗ್ಯಾಂಗ್‌ಗಳ ನಡುವೆ ಸಂಘರ್ಷ ಉಂಟಾಗಿದೆ. ರೌಡಿಶೀಟರ್ ಇಮ್ರಾನ್ ಅಲಿಯಾಸ್ ಬಬ್ಲೂ ಕೊಲೆಗೆ ಸಂಚು.

ಬಬ್ಲೂ ಕೊಲೆಗೆ ಬರೋಬ್ಬರಿ 30 ಲಕ್ಷ ರೂಪಾಯಿಗಳ ಸುಪಾರಿ ನೀಡಲಾಗಿತ್ತು ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಶಿವಮೊಗ್ಗ ಮೂಲದ ಇಬ್ಬರು ಯುವಕರನ್ನು ಬಬ್ಲೂ ತಂಡವು ಹಿಡಿದು ಪೊಲೀಸರಿಗೆ ಒಪ್ಪಿಸಿದೆ. ಆರೋಪಿಗಳಾದ ಜುನೇದ ಮತ್ತು ಸಕೀಬ್ ಎಂಬ ಯುವಕರು 5 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದು ಬಬ್ಲೂ ಮೇಲೆ ದಾಳಿ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ನಮಾಜ್ ಖಾನ್ ಪಠಾಣ, ಜಾಕೀರ್ ಬೇಗ, ಮೋಹಿರ ಖಾನ್, ಮತ್ತು ಶಬಾಜ್ ಎಂಬುವವರ ವಿರುದ್ಧ ಬಬ್ಲೂ ಗ್ಯಾಂಗ್ ಆರೋಪ ಮಾಡಿದೆ. ಮೂಲಗಳ ಪ್ರಕಾರ, ಸ್ಥಳೀಯ ಕ್ಲಬ್ ವಿಚಾರವಾಗಿ ಬಬ್ಲೂ ಮತ್ತು ಶಬಾಜ್ ಗ್ಯಾಂಗ್‌ಗಳ ನಡುವೆ ಈ ದ್ವೇಷ ಮತ್ತು ಸಂಘರ್ಷ ಶುರುವಾಗಿತ್ತು. ಈ ಸಂಬಂಧ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ನಾಳೆ ಚಿತ್ತಾಪುರದಲ್ಲಿ RSS ಪಥ ಸಂಚಲನ – ಕಲ್ಬುರ್ಗಿ ಜಿಲ್ಲಾಡಳಿತಕ್ಕೆ ಮಾಹಿತಿ.. ಬಿಗಿ ಭದ್ರತೆ!

Btv Kannada
Author: Btv Kannada

Read More