ಕಲಬುರಗಿ : ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನಾಳೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ದ ಪಥಸಂಚಲನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭದ್ರತೆಯನ್ನು ಹೆಚ್ಚಿಸಲಾಗಿದೆ.

ಕಲಬುರಗಿ ಜಿಲ್ಲಾಡಳಿತವು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಿ ನೀಡುವಂತೆ ಸೂಚಿಸಿದೆ. ಇಂದು ಸಂಜೆಯೊಳಗೆ 300 ಗಣವೇಶಧಾರಿಗಳ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಸಂಚಲನದಲ್ಲಿ ಭಾಗವಹಿಸುವವರ ಪಟ್ಟಿ ಮತ್ತು ವಿವರಗಳನ್ನು ಚಿತ್ತಾಪುರ ತಹಶೀಲ್ದಾರ್ ಮತ್ತು ಪೊಲೀಸರಿಗೆ ಸಲ್ಲಿಸಬೇಕು. ಅಲ್ಲದೆ, ಪಥಸಂಚಲನದಲ್ಲಿ ಕೇವಲ ಚಿತ್ತಾಪುರ ಕಂದಾಯ ತಾಲ್ಲೂಕಿನವರು ಮಾತ್ರ ಭಾಗವಹಿಸಬೇಕು ಎಂದು ನಿರ್ಬಂಧ ವಿಧಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಕಾರ್ಯಕ್ರಮ ನಡೆಸಲು ಮನವಿ ಮಾಡಲಾಗಿದೆ.

ನಾಳೆ ಮಧ್ಯಾಹ್ನ 3:30 ರಿಂದ ಸಂಜೆ 5:45 ರವರೆಗೆ. ಬಜಾಜ್ ಕಲ್ಯಾಣ ಮಂಟಪದಿಂದ ಆರಂಭಗೊಂಡು APMC ಆವರಣದವರೆಗೆ. ಜಿಲ್ಲಾಡಳಿತವು ಒಟ್ಟು 1.5 ಕಿಲೋ ಮೀಟರ್ ದೂರದ ಪಥಸಂಚಲನಕ್ಕೆ ಅವಕಾಶ ನೀಡಿದೆ. ಪೊಲೀಸರು ಪಥಸಂಚಲನ ಸಾಗುವ ಸಂಪೂರ್ಣ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ನಾಳಿನ ಕಾರ್ಯಕ್ರಮಕ್ಕೆ ಯಾವುದೇ ಲೋಪವಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಇದನ್ನೂ ಓದಿ : ಸೆಲೆಬ್ರೆಟಿ ಕ್ರಿಕೆಟ್ ಹೆಸರಲ್ಲಿ ಕನ್ನಡದ ನಟಿ ಮೇಲೆ ಅತ್ಯಾಚಾರ.. ಎವಿಆರ್ ಗ್ರೂಪ್‌ನ ಸಂಸ್ಥಾಪಕ, ಉದ್ಯಮಿ ಅರವಿಂದ್ ರೆಡ್ಡಿ ಅರೆಸ್ಟ್!







