ಸೆಲೆಬ್ರೆಟಿ ಕ್ರಿಕೆಟ್ ಹೆಸರಲ್ಲಿ ಕನ್ನಡದ ನಟಿ ಮೇಲೆ ಅತ್ಯಾಚಾರ.. ಎವಿಆರ್ ಗ್ರೂಪ್‌ನ ಸಂಸ್ಥಾಪಕ, ಉದ್ಯಮಿ ಅರವಿಂದ್ ರೆಡ್ಡಿ ಅರೆಸ್ಟ್!

ಬೆಂಗಳೂರು : ಸೆಲೆಬ್ರೆಟಿ ಕ್ರಿಕೆಟ್ ಮ್ಯಾಚ್‌ಗಳ ನೆಪದಲ್ಲಿ ಸ್ಯಾಂಡಲ್‌ವುಡ್ ನಟಿಯರ ಮೇಲೆ ನಡೆಯುತ್ತಿದ್ದ ದಂಧೆಗೆ ಬಿಗ್ ಬ್ರೇಕ್ ಬಿದ್ದಿದೆ. ಕನ್ನಡ ಚಿತ್ರರಂಗದ ಖ್ಯಾತ ನಟಿ ಮೇಲೆ ಅತ್ಯಾಚಾರ ಎಸಗಿದ ಗಂಭೀರ ಆರೋಪ ಎದುರಿಸುತ್ತಿದ್ದ ಉದ್ಯಮಿ ಮತ್ತು ಚಲನಚಿತ್ರ ನಿರ್ಮಾಪಕ ಅರವಿಂದ ರೆಡ್ಡಿಯನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ. ಈ ಸುದ್ದಿ ಇಡೀ ಸ್ಯಾಂಡಲ್‌ವುಡ್ ನಟಿಯರು, ಕಿರುತೆರೆ ಆ್ಯಕ್ಟರ್ಸ್‌ ಬೆಚ್ಚಿ ಬೀಳುವಂತೆ ಮಾಡಿದೆ. ಅರವಿಂದ ರೆಡ್ಡಿ ಎವಿಆರ್ ಗ್ರೂಪ್‌ನ ಸಂಸ್ಥಾಪಕ ಮತ್ತು ಚಲನಚಿತ್ರ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

ಈತ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ನಾಯಕನೂ ಆಗಿದ್ದ. ದುಬೈ, ಶ್ರೀಲಂಕಾ ಸೇರಿದಂತೆ ಹಲವು ಕಡೆ ಎವಿಆರ್ ಗ್ರೂಪ್ ಸ್ಪಾನ್ಸರ್‌ನಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುತ್ತಿದ್ದ. ಈ ಮ್ಯಾಚ್‌ಗಳ ಮೂಲಕವೇ ನಟಿಯರಿಗೆ ‘ಗಾಳ’ ಹಾಕಿ ಶೋಷಣೆ ಮಾಡುತ್ತಿದ್ದ. 9 ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿಯನ್ನು ವಿದೇಶದಲ್ಲಿ ಲಾರ್ಸ್ ಕ್ರಿಕೆಟ್ ಮ್ಯಾಚ್‌ ನೆಪದಲ್ಲಿ ಮಂಚಕ್ಕೆ ಕರೆದು ರೇಪ್ ಮಾಡಿರುವ ಆರೋಪ ಅರವಿಂದ್ ರೆಡ್ಡಿ ಮೇಲಿದೆ. ಕಳೆದ ಮೂರು ವರ್ಷಗಳಿಂದ ಸೆಲೆಬ್ರೆಟಿ ಮ್ಯಾಚ್‌ಗಳಿಗೆ ಹೋದ ನಟಿಯರು ಮತ್ತು ಆ್ಯಂಕರ್ಸ್‌ಗಳಿಗೆ ಸಂಬಂಧಿಸಿದಂತೆ ಇದು ಅತ್ಯಂತ ಗಂಭೀರ ಸುದ್ದಿಯಾಗಿದೆ. ಖ್ಯಾತ ನಟಿಯೊಬ್ಬರು ಅರವಿಂದ ರೆಡ್ಡಿ ವಿರುದ್ಧ ದೂರು ದಾಖಲಿಸಿದ ನಂತರ ಈ ದಂಧೆಯ ಮತ್ತಷ್ಟು ಮುಖಗಳು ಬಯಲಾಗಿವೆ. ದೂರು ದಾಖಲಾದ ಬಳಿಕವೂ ಉದ್ಯಮಿ ಅರವಿಂದ್ ರೆಡ್ಡಿ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಭಾವ ಬಳಸಿ ಬಂಧನದಿಂದ ತಪ್ಪಿಸಿಕೊಂಡಿದ್ದ.

ಈತ ಹಲವು ನಟಿಯರನ್ನು ರೇಪ್ ಮಾಡಿ ಹಣಬಲದಿಂದ ದಕ್ಕಿಸಿಕೊಂಡಿದ್ದ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಗೋವಿಂದರಾಜನಗರದ ಖಡಕ್ ಇನ್ಸ್‌ಪೆಕ್ಟರ್ ಸುಬ್ರಹ್ಮಣಿಯವರ ನಡೆ ಅತ್ಯಂತ ದಿಟ್ಟತನದಿಂದ ಕೂಡಿತ್ತು. ಯಾವ ಒತ್ತಡಕ್ಕೂ ಮಣಿಯದೆ ಇನ್ಸ್‌ಪೆಕ್ಟರ್ ಸುಬ್ರಹ್ಮಣಿಯವರು ಆರೋಪಿ ಅರವಿಂದ್ ರೆಡ್ಡಿ ಬಂಧನಕ್ಕೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ನನ್ನನ್ನೂ ಯಾರೂ ಬಂಧಿಸಲ್ಲ’ ಎಂದು ಅಂದುಕೊಂಡಿದ್ದ ಉದ್ಯಮಿ ಅರವಿಂದ್ ರೆಡ್ಡಿಯನ್ನು, ಆತ ಶ್ರೀಲಂಕಾದಿಂದ ಬೆಂಗಳೂರಿಗೆ ಬರುವಾಗಲೇ ಇನ್ಸ್‌ಪೆಕ್ಟರ್ ಸುಬ್ರಹ್ಮಣಿ ಮತ್ತು ತಂಡ ಲಾಕ್ ಮಾಡಿದ್ದಾರೆ.

ಸೆಲೆಬ್ರೆಟಿ ಕ್ರಿಕೆಟ್ ಟೂರ್ನಿಮೆಂಟ್‌ಗಳ ಮರೆಯಲ್ಲಿ ನಡೆಯುತ್ತಿದ್ದ ‘ಕಾಮದಾಟ’ದ ಹಗರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಖ್ಯಾತ ನಟಿ ಮೇಲೆ ರೇಪ್ ಮಾಡಿದ ಆರೋಪದ ಮೇಲೆ ಬಂಧಿಯಾಗಿರುವ ಉದ್ಯಮಿ ಅರವಿಂದ್ ರೆಡ್ಡಿಯ ಕೃತ್ಯಗಳು ಕೇವಲ ಒಂದೇ ಪ್ರಕರಣಕ್ಕೆ ಸೀಮಿತವಾಗಿಲ್ಲ ಎಂಬ ಆಘಾತಕಾರಿ ಮಾಹಿತಿ ತನಿಖೆ ವೇಳೆ ಹೊರಬಿದ್ದಿದೆ. ಗೋವಿಂದರಾಜನಗರದ ಇನ್ಸ್‌ಪೆಕ್ಟರ್ ಸುಬ್ರಹ್ಮಣಿಯವರ ಖಡಕ್ ತನಿಖೆಯಲ್ಲಿ ಹಲವು ರಹಸ್ಯಗಳು ಬಯಲಾಗಿದ್ದು, ಉದ್ಯಮಿ ಅರವಿಂದ್ ರೆಡ್ಡಿ ವಿರುದ್ಧ ಬರೋಬ್ಬರಿ 5 ರಿಂದ 6 ಅತ್ಯಾಚಾರ ಪ್ರಕರಣಗಳು ದಾಖಲಾಗಿರುವ ಸಾಧ್ಯತೆ ಇದೆ. ಈ ಪ್ರಕರಣಗಳಲ್ಲಿ ಹಲವು ನಟಿಯರು ಮತ್ತು ಕಿರುತೆರೆ ಕಲಾವಿದೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

ಅರವಿಂದ್ ರೆಡ್ಡಿ ಕೇವಲ ರೇಪ್ ಮಾಡಿ ಸುಮ್ಮನಾಗಿಲ್ಲ. ನೊಂದ ನಟಿಗೆ ಆತಂಕಕಾರಿ ರೀತಿಯಲ್ಲಿ ಬ್ಲ್ಯಾಕ್‌ಮೇಲ್ ಕೂಡ ಮಾಡಿರುವ ಆರೋಪ ಕೇಳಿಬಂದಿದೆ. ನಟಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಅಲ್ಲದೆ, ನಟಿಯ ಮನೆ ಬಳಿ ಗೂಂಡಾಗಳನ್ನು ಕಳುಹಿಸಿ ಜೀವ ಬೆದರಿಕೆ ಹಾಕಿರುವಂತಹ ಗಂಭೀರ ಆರೋಪಗಳೂ ಅರವಿಂದ್ ರೆಡ್ಡಿ ಮೇಲೆ ದಾಖಲಾಗಿವೆ. ಈ ಹಗರಣದ ವ್ಯಾಪ್ತಿ ಮತ್ತು ಗಂಭೀರತೆಯನ್ನು ಪರಿಗಣಿಸಿ, ಕ್ರಿಕೆಟ್ ಟೂರ್ನಿಮೆಂಟ್ ಲೈಂಗಿಕ ಕಿರುಕುಳ ಪ್ರಕರಣವನ್ನು CCB (Central Crime Branch) ತನಿಖೆಗೆ ಒಪ್ಪಿಸುವ ಸಾಧ್ಯತೆಗಳು ದಟ್ಟವಾಗಿವೆ. ಒಂದು ವೇಳೆ ಈ ಪ್ರಕರಣ ಸಿ.ಸಿ.ಬಿ ಕೈಗೆ ಹೋದರೆ, ಕ್ರಿಕೆಟ್, ಕಬಡ್ಡಿ, ಬ್ಯಾಡ್ಮಿಂಟನ್ ಟೂರ್ನಿಗಳ ಹೆಸರಿನಲ್ಲಿ ‘ಸೆಕ್ಸ್’ ಸ್ಕ್ಯಾಂಡಲ್‌ನಲ್ಲಿ ಭಾಗಿಯಾದ ಹಲವು ಉದ್ಯಮಿಗಳಿಗೆ ಸಂಕಷ್ಟ ಎದುರಾಗುವುದು ಬಹುತೇಕ ಖಚಿತ. ಪೊಲೀಸರು ಈ ‘ಸೆಕ್ಸ್’ ಸ್ಕ್ಯಾಂಡಲ್ ಬಗ್ಗೆ ಸಮಗ್ರ ತನಿಖೆ ನಡೆಸಿದರೆ, ಇದು ಕೇವಲ ಒಬ್ಬ ಉದ್ಯಮಿಯ ಕೃತ್ಯವಲ್ಲ, ಬದಲಾಗಿ ಒಂದು ದಂಧೆ ಎಂಬುದೂ ಹೊರಬರಲಿದೆ.

ಸ್ಯಾಂಡಲ್‌ವುಡ್‌ನ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡುತ್ತಿರುವ ಈ ಮೋಜಿನ ಟೂರ್ನಿಮೆಂಟ್‌ಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ‘ಸೆಕ್ಸ್’ ಸ್ಕ್ಯಾಂಡಲ್ ಆಗಿ ಮಾರ್ಪಟ್ಟಿರುವ ಈ ಕ್ರಿಕೆಟ್, ಕಬಡ್ಡಿ, ಬ್ಯಾಡ್ಮಿಂಟನ್ ಟೂರ್ನಿಗಳನ್ನು ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯ ಕೇಳಿಬಂದಿದೆ. ಈ ಟೂರ್ನಿಗಳನ್ನು ನಿಷೇಧ ಮಾಡದಿದ್ದರೆ, ಇದು ನಟಿಯರ ಮೇಲೆ ರೇಪ್ ಮಾಡುವ ದಂಧೆಯಾಗಿ ಮುಂದುವರಿಯುವ ಅಪಾಯವಿದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ – ಕೇಂದ್ರ ಸಚಿವರ ಭೇಟಿ, ಕಪಿಲ್ ಸಿಬಲ್ ಕಾರ್ಯಕ್ರಮದಲ್ಲಿ ಭಾಗಿ!

Btv Kannada
Author: Btv Kannada

Read More