ಬೆಂಗಳೂರು : ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜಧಾನಿ ದೆಹಲಿಗೆ ಏಕದಿನ ಪ್ರವಾಸ ಕೈಗೊಂಡಿದ್ದಾರೆ. ಪ್ರಮುಖ ರಾಜಕೀಯ ಮತ್ತು ಆಡಳಿತಾತ್ಮಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.

ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಹಿರಿಯ ನಾಯಕ ಮತ್ತು ವಕೀಲ ಕಪಿಲ್ ಸಿಬಲ್ ಅವರ ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ. ಪ್ರವಾಸದ ಸಂದರ್ಭದಲ್ಲಿ, ಸಿಎಂ ಅವರು ಕೇಂದ್ರ ಸಚಿವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಈ ಭೇಟಿಯ ಮುಖ್ಯ ಉದ್ದೇಶ ಕಬ್ಬು ಬೆಳೆ ನಿಗದಿ ವಿಚಾರವಾಗಿ ಸಚಿವರ ಭೇಟಿ ಮತ್ತು ಮನವಿ ಸಲ್ಲಿಸುವುದು.
ದೆಹಲಿಯ ಕಾರ್ಯಕ್ರಮಗಳನ್ನು ಮುಗಿಸಿ ಮುಖ್ಯಮಂತ್ರಿಗಳು ಇಂದೇ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ರಾತ್ರಿ 10 ಗಂಟೆಗೆ ದೆಹಲಿಯಿಂದ ಪ್ರಯಾಣ. ಮಧ್ಯರಾತ್ರಿ 12:30ಕ್ಕೆ ಬೆಂಗಳೂರಿನಲ್ಲಿ ಆಗಮನ.
ಇದನ್ನೂ ಓದಿ : ಬಿಹಾರ ರಿಸಲ್ಟ್ ಬೆನ್ನಲ್ಲೇ ದೆಹಲಿಗೆ ಸಿಎಂ & ಡಿಸಿಎಂ – ‘ಕೈ’ ಹೈಕಮಾಂಡ್ & ಅಮಿತ್ ಶಾ ಜೊತೆ ಚರ್ಚೆ!







