ಕನ್ನಡ ಚಿತ್ರರಂಗದ ಭರವಸೆಯ ನಟ ಕಮ್ ನಿರ್ದೇಶಕ ಅನೀಶ್ ತೇಜೇಶ್ವರ್ ನಟಿಸಿ, ನಿರ್ದೇಶಿಸಿರುವ ಲವ್ ಒಟಿಪಿ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಅನೀಶ್ ಅವರಿಗೆ ಜೋಡಿಯಾಗಿ ಪ್ರಮೋದಿನಿ ಹಾಗೂ ಸ್ವರೂಪಿಣಿ ಅಭಿನಯಿಸಿದ್ದಾರೆ. ಲವ್ ಒಟಿಪಿ ಇದು ಟೈಟಲೇ ಹೇಳುವಂತೆ ಪಕ್ಕಾ ಲವ್ ಸ್ಟೋರಿ ಇರುವ ಸಿನಿಮಾ.

ವಿಜಯ್ ಎಂ. ರೆಡ್ಡಿ ನಿರ್ಮಾಣದ ಈ ಸಿನಿಮಾಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲೆಡೆ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಲವ್ ಸ್ಟೋರಿ ಸಿನಿಮಾ ಎಂದ ತಕ್ಷಣ ಇದು ಮಾಮೂಲಿ ಕಹಾನಿ ಇರುವ ಸಿನಿಮಾವಲ್ಲ. ನಟ, ನಿರ್ದೇಶಕ ಅನೀಶ್ ತೇಜೇಶ್ವರ್ ಅವರು ತುಸು ಭಿನ್ನವಾದ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಈ ವಿಭಿನ್ನ ಪ್ರೇಮಕಥೆಯ ಸಿನಿಮಾ ನೋಡಿ ಸಿನಿಪ್ರಿಯರು ಫಿದಾ ಆಗಿದ್ದಾರೆ.

‘ಲವ್ ಒಟಿಪಿ’ ಸಿನಿಮಾದಲ್ಲಿ ಅಪ್ಪ-ಮಗನ ಬಾಂಧವ್ಯದ ಕಥೆ ಕೂಡ ಹೈಲೈಟ್ ಆಗಿದೆ. ತನೀಶ್ ತೇಜೇಶ್ವರ್ ಹಾಗೂ ರಾಜೀವ್ ಕನಕಾಲ ಅವರು ಈ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪೊಲೀಸ್ ಅಧಿಕಾರಿಯಾಗಿ, ಅಪ್ಪನಾಗಿ ರಾಜೀವ್ ಅವರು ಗಮನ ಸೆಳೆಯುವ ಅಭಿನಯ ನೀಡಿದ್ದಾರೆ. ಇಡೀ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಮಹತ್ವ ಸಿಕ್ಕಿದೆ. ಅಪ್ಪ-ಮಗನ ಕಥೆಯಿಂದಾಗಿ ಫ್ಯಾಮಿಲಿ ಪ್ರೇಕ್ಷಕರು ಕೂಡ ‘ಲವ್ ಒಟಿಪಿ’ ಸಿನಿಮಾವನ್ನು ಎಂಜಾಯ್ ಮಾಡಿದ್ದಾರೆ.

ಲವ್ ಒಟಿಪಿ ಚಿತ್ರವನ್ನು ವಿಜಯ್ ಎಂ. ರೆಡ್ಡಿ ನಿರ್ಮಾಣ ಮಾಡಿದ್ದು, ಸಿನಿಮಾದಲ್ಲಿ ನಾಟ್ಯ ರಂಗ, ರಾಜೀವ್ ಕನಕಾಲ, ಪ್ರಮೋದಿನಿ, ಚೇತನ್ ಗಂಧರ್ವ, ತುಳಸಿ ಶಿವಮಣಿ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ : ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಗ್ರ್ಯಾಂಡ್ ರಿಲೀಸ್ – ಮೊದಲ ದಿನವೇ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್!







